alex Certify ಪರೀಕ್ಷೆ ಬರೆಯಲು ಬಂದ ನಟಿ ಜೊತೆಗೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರೀಕ್ಷೆ ಬರೆಯಲು ಬಂದ ನಟಿ ಜೊತೆಗೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು…!

ಯಾರಾದರೂ ಸ್ಟಾರ್ಸ್ಗಳು ರಸ್ತೆಯಲ್ಲಿ ಓಡಾಡುತ್ತಿದ್ದಾರೆ, ಅಥವಾ ಯಾವುದಾದರೂ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಗೊತ್ತಾದರೆ ಸಾಕು ಅಭಿಮಾನಿಗಳು ಎಷ್ಟೇ ದೂರ ಇದ್ದರೂ ಅವರ ಬಳಿ ಬಂದು ಸೆಲ್ಫಿ ಪಡೆಯದೇ ಹೋಗುವುದಿಲ್ಲ. ಅಂಥದರಲ್ಲಿ ಈ ನಟಿ ಎಕ್ಸಾಂ ಬರೆಯೋದಿಕ್ಕೆ ಜೊತೆಯಲ್ಲಿಯೇ ಇದ್ದಾರೆ ಅಂದರೆ ಅಕ್ಕಪಕ್ಕದಲ್ಲಿ ಕೂತಿರುವವರಿಗೆ ರೋಮಾಂಚನ ಆಗೋದು ಗ್ಯಾರಂಟಿ.

ಇಂತಹದ್ದೇ ಘಟನೆಯೊಂದು ತಿರುಚ್ಚಿಯಲ್ಲಿ ನಡೆದಿದೆ. ಹಲವಾರು ಸಿನಿಮಾಗಳ ಮೂಲಕ ಅಭಿಮಾನಿಗಳ ದೊಡ್ಡ ಬಳಗವನ್ನೇ ಸಂಪಾದಿಸಿರುವ ನಟಿ ಸಾಯಿ ಪಲ್ಲವಿ ಇತ್ತೀಚೆಗೆ ತಿರುಚ್ಚಿಯ ಎಂಎಎಂ ಕಾಲೇಜಿನಲ್ಲಿ ವೈದ್ಯಕೀಯ ಪರೀಕ್ಷೆ ಬರೆದಿದ್ದಾರೆ.

ಈ ನಟಿ ಮುಖಕ್ಕೆ ಮಾಸ್ಕ್ ಹಾಕೋದರ ಜೊತೆಗೆ ಯಾರಿಗೂ ತಿಳಿಯಬಾರದು ಅಂತ ತಲೆಗೆ ದುಪ್ಪಟ್ಟ ಕಟ್ಟಿಕೊಂಡು ಕಾಲೇಜಿಗೆ ಬಂದಿದ್ದಾರೆ. ಆದರೆ ಎಕ್ಸಾಂ ಹಾಲ್‌ನಲ್ಲಿ ಹಾಲ್‌ ಟಿಕೆಟ್ ನೋಡುವಾಗ ಅನಿವಾರ್ಯವಾಗಿ ಮುಖ ತೋರಿಸಿದ್ದಾರೆ. ಆಗ ಅಲ್ಲಿ ಪರೀಕ್ಷೆ ಬರೆಯುತ್ತಿದ್ದವರು ಒಂದು ಕ್ಷಣ ಶಾಕ್ ಆಗಿರೋದಂತೂ ನಿಜ. ನಂತರ ಈ ನಟಿಯ ಜೊತೆ ಅಲ್ಲಿದ್ದವರು ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಯಾರಿಗೂ ಇಲ್ಲ ಎನ್ನದೇ ಎಲ್ಲರ ಜೊತೆಯಲ್ಲಿ ಖುಷಿ ಖುಷಿಯಾಗಿ ಫೋಟೋ ತೆಗೆಸಿಕೊಂಡಿದ್ದಾರೆ ಈ ನಟಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...