alex Certify ದಕ್ಷಿಣ ಭಾರತದ ನಟಿ ಮೇಲೆ ಮುಂಬೈನಲ್ಲಿ ಅತ್ಯಾಚಾರ: ಫಿಟ್ನೆಸ್ ತರಬೇತುದಾರ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಕ್ಷಿಣ ಭಾರತದ ನಟಿ ಮೇಲೆ ಮುಂಬೈನಲ್ಲಿ ಅತ್ಯಾಚಾರ: ಫಿಟ್ನೆಸ್ ತರಬೇತುದಾರ ಅರೆಸ್ಟ್

ಮುಂಬೈ: ದಕ್ಷಿಣ ಭಾರತದ ನಟಿ ಮೇಲೆ ಮುಂಬೈ ಫಿಟ್ನೆಸ್ ತರಬೇತುದಾರ ಅತ್ಯಾಚಾರ ಎಸಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಮುಂಬೈನ ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ಸಿನಿಮಾ ನಟಿಯ ಮೇಲಿನ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಫಿಟ್ನೆಸ್ ತರಬೇತುದಾರರಿಂದ ಮದುವೆಯ ನೆಪದಲ್ಲಿ ನಟಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ವರದಿಯಾಗಿದೆ. ನಟಿ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಆರೋಪಿ ಫಿಟ್‌ನೆಸ್ ತರಬೇತುದಾರನ ವಿರುದ್ಧ ಬಾಧಿತ ನಟಿ ಮುಂಬೈನ ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಜೀವ ಬೆದರಿಕೆಯ ಪ್ರಕರಣವನ್ನು ದಾಖಲಿಸಿದ್ದಾರೆ.

ಮದುವೆಯ ನೆಪದಲ್ಲಿ ಕಳೆದ ವರ್ಷದಿಂದ ನಟಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದು, ಫಿಟ್‌ನೆಸ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376, 323, 504, 506(2), 67 ಮತ್ತು 67 (ಎ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 2021 ಮತ್ತು 2022 ರ ನಡುವೆ ನಟಿಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...