ಮುಂಬೈ: ಅಕ್ರಮವಾಗಿ ವಸತಿ ಕಟ್ಟಡ ನಿರ್ಮಾಣ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಬೃಹನ್ ಮುಂಬೈ ಕಾರ್ಪೊರೇಷನ್ ನೀಡಿದ್ದ ನೋಟೀಸ್ ಗೆ ತಡೆ ನೀಡಲು ಹೈಕೋರ್ಟ್ ನಿರಾಕರಣೆ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸೋನು ಸೂದ್ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಬಿ.ಎಂ.ಆರ್.ಸಿ. ಅನುಮತಿಯಿಲ್ಲದೇ ಜುಹುವಿನಲ್ಲಿ 6 ಮಹಡಿ ವಸತಿ ಕಟ್ಟಡವೊಂದನ್ನು ಸೋನು ಸೂದ್ ಹೋಟೆಲ್ ಆಗಿ ಪರಿವರ್ತಿಸಿದ್ದಾರೆ ಎಂದು ಪಾಲಿಕೆ ಆರೋಪಿಸಿತ್ತು. ಈ ಸಂಬಂಧ 2020ರ ಅಕ್ಟೋಬರ್ ನಲ್ಲಿ ಸೂದ್ ವಿರುದ್ಧ ನೋಟೀಸ್ ಜಾರಿ ಮಾಡಿ ಕಟ್ಟಡ ತೆರವಿಗೆ ಸೂಚಿಸಿತ್ತು.
ನೋಟೀಸ್ ಗೆ ಸ್ಪಂದಿಸಲು 10 ದಿನಗಳ ಕಾಲಾವಕಾಶ ಬೇಕು ಎಂದು ಅಲ್ಲಿಯವರೆಗೆ ಕಟ್ಟಡ ತೆರವು ಮಾಡದಂತೆ ಪಾಲಿಕೆಗೆ ನಿರ್ದೇಶಿಸುವಂತೆ ಹೈಕೋರ್ಟ್ ಗೆ ಸೋನು ಸೂದ್ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್ ಅಗತ್ಯವಿದ್ದರೆ ಪಾಲಿಕೆ ಮೊರೆ ಹೋಗುವಂತೆ ತಿಳಿಸಿತ್ತು.
ಸಹ ಸ್ಪರ್ಧಿಯ ಚೆಡ್ಡಿ ಎಳೆದ ರಾಖಿ: ಬೆಂಬಲಿಸಿದ ಸಲ್ಮಾನ್ ಗೆ ನೆಟ್ಟಿಗರ ತರಾಟೆ
ಗಡುವು ಮುಗಿದಿದ್ದರೂ ಸೂದ್ ಕಟ್ಟಡ ಮಾರ್ಪಾಡು ಹಾಗೂ ಹೊಸ ಸೇರ್ಪಡೆಗಳನ್ನು ಮರುಸ್ಥಾಪಿಸಿಲ್ಲ ಎಂದು ಪಾಲಿಕೆ ಅಧಿಕಾರಿಗಳು ದೂರಿದ್ದರು. ಇದರ ಬೆನ್ನಲ್ಲೇ ಬಿಎಂಸಿ ನೀಡಿದ್ದ ನೋಟೀಸ್ ಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದ್ದು, ಇದೀಗ ಸೋನು ಸೂದ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.