alex Certify ಈ ಕಾರಣಕ್ಕೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾದ ಬಾಲಿವುಡ್​ ನಟ..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾದ ಬಾಲಿವುಡ್​ ನಟ..​..!

ಮಹಾಶಿವರಾತ್ರಿಯ ದಿನದಂದು ಸಾಕಷ್ಟು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ.

ಆದರೆ ಬಾಲಿವುಡ್​ ನಟ ಸೋನು ಸೂದ್​ ಮಹಾಶಿವರಾತ್ರಿಯಂದು ಟ್ವಿಟರ್​ನಲ್ಲಿ ಜನರಿಗೆ ಸಲಹೆ ನೀಡೋಕೆ ಹೋಗಿ ಹಿಂದೂಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಮಹಾಶಿವರಾತ್ರಿ ದಿನದಂದು ಶಿವನ ಫೋಟೋಗಳನ್ನ ಶೇರ್​ ಮಾಡುವ ಬದಲು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ, ʼಓಂ ನಮಃ ಶಿವʼ ಎಂದು ಟ್ವೀಟಾಯಿಸಿದ್ದರು.

ಈ ಟ್ವೀಟ್​ನ್ನು ಕೆಲವರು ಬೆಂಬಲಿಸಿದ್ರೆ, ಇನ್ನು ಕೆಲ ಶಿವನ ಭಕ್ತರು ವಿರೋಧಿಸಿದ್ದಾರೆ. ನಮ್ಮ ಹಬ್ಬ ನಮ್ಮ ಆಯ್ಕೆ. ನಿಮ್ಮ ಸಲಹೆಯ ಅವಶ್ಯಕತೆ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ ಮಾತ್ರವಲ್ಲದೇ ತರಹೇವಾರಿ ರೀತಿಯಲ್ಲಿ ಸೋನು ಸೂದ್​ರನ್ನ ಟ್ರೋಲ್​ ಮಾಡಲಾಗಿದೆ.

ಇದಾದ ಬಳಿಕ ಸೋನು ಸೂದ್​ ಶಿವನ ಫೋಟೋವನ್ನ ಶೇರ್​ ಮಾಡಿ ʼಓಂ ನಮಃ ಶಿವʼ ಎಂದು ಬರೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...