alex Certify ಈ ಕಾರಣಕ್ಕೆ ಟ್ರೋಲಿಗರನ್ನ ಕತ್ತೆಗೆ ಹೋಲಿಸಿದ ಗಾಯಕ ಸೋನು ನಿಗಮ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಟ್ರೋಲಿಗರನ್ನ ಕತ್ತೆಗೆ ಹೋಲಿಸಿದ ಗಾಯಕ ಸೋನು ನಿಗಮ್​…!

ದೇಶದಲ್ಲಿ ಕೊರೊನಾ ಎರಡನೆ ಅಲೆ ಭೀಕರವಾಗಿರೋದ್ರಿಂದ ಮಾಸ್ಕ್​ ಬಳಕೆಗೆ ತುಂಬಾನೇ ಮಹತ್ವ ನೀಡಲಾಗ್ತಿದೆ. ಆದರೆ ಬಾಲಿವುಡ್​ ಗಾಯಕ ಸೋನು ನಿಗಮ್​ ಮಾಸ್ಕ್​ ಧರಿಸದ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವಿವಾದಕ್ಕೆ ಕಾರಣರಾದ್ರು. ಕೋವಿಡ್​ ರೋಗಿಗಳಿಗೆ ಶ್ರಮಿಸುತ್ತಿರುವ ಸೋನು ನಿಗಮ್​​ ರಕ್ತದಾನ ಶಿಬಿರ ನಡೆಸಿದ್ದು ಮಾತ್ರವಲ್ಲದೇ ಆಂಬುಲೆನ್ಸ್ ಹಾಗೂ ಮುಂಬೈ ಪಾಲಿಕೆ ವ್ಯಾಪ್ತಿಗೆ 250 ಆಕ್ಸಿಜನ್​ ಕ್ಯಾನ್ಸ್‌ ಟ್ರೇಟರ್​ ದೇಣಿಗೆ ರೂಪದಲ್ಲಿ ನೀಡಿದ್ದಾರೆ.

ರಕ್ತದಾನ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸೋನು ನಿಗಮ್​ ಫೋಟೊ ಶೇರ್​ ಮಾಡಿದ್ದರು. ಆದರೆ ಈ ಫೋಟೋದಲ್ಲಿ ಅವರು ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ನೆಟ್ಟಿಗರು ನಕಾರಾತ್ಮಕವಾಗಿ ಕಮೆಂಟ್​ ಮಾಡಲು ಶುರು ಮಾಡಿದ್ದರು.

ನಿಗದಿತ ಸಮಯಕ್ಕಿಂತ ಮುಂಚೆಯೇ ಕೋವಿಡ್ ಲಸಿಕೆ ಪಡೆದ ಬಿಜೆಪಿ ಶಾಸಕನ ಪುತ್ರ…!

ಈ ಎಲ್ಲಾ ಟ್ರೋಲ್​ಗಳಿಗೆ ತುಸು ಖಾರವಾಗಿಯೇ ಸೋನು ನಿಗಮ್​ ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿರುವ ಐನ್​ಸ್ಟೈನ್​ಗಳಿಗೆ ನಿಮ್ಮದೇ ಭಾಷೆಯಲ್ಲೇ ಉತ್ತರ ನೀಡುವೆ. ಅರೆ ಕತ್ತೆಗಳಾ, ರಕ್ತದಾನ ಮಾಡುವ ವೇಳೆ ಯಾರಿಗೂ ಮಾಸ್ಕ್​ ಧರಿಸಲು ಅನುಮತಿ ನೀಡೋದಿಲ್ಲ. ಎಡಪಂಥೀಯರೇ…..ಇನ್ನೂ ಎಷ್ಟು ಅಂತಾ ಕೆಳಗೆ ಬೀಳುತ್ತೀರಾ..? ಎಂದು ಬರೆದಿದ್ದಾರೆ.

View this post on Instagram

A post shared by Sonu Nigam (@sonunigamofficial)

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...