ಅಮೆರಿಕನ್ ಇಂಜಿನಿಯರಿಂಗ್ ಹಾಗೂ ರೊಬೊಟಿಕ್ಸ್ ವಿನ್ಯಾಸ ಕಂಪನಿಯಾದ ಬೋಸ್ಟನ್ ಡೈನಾಮಿಕ್ಸ್ ಈ ವರ್ಷ ತನ್ನ ಜನಪ್ರಿಯ ಕಲೆಕ್ಷನ್ ರೋಬೋ ಡಾಗ್ ಮೂಲಕವೇ ಹೆಚ್ಚು ಸುದ್ದಿಯಾಗಿದೆ.
ಮೇ ತಿಂಗಳಲ್ಲಿ ಸಿಂಗಾಪುರ ಉದ್ಯಾನವನಕ್ಕೆ ಭೇಟಿ ನೀಡುವವರಿಗೆ ಸಾಮಾಜಿಕ ದೂರ ಕಾಪಾಡಿಕೊಳ್ಳಲು ನಯವಾಗಿ ಹೇಳುವ ಮೂಲಕ ಈ ರೊಬೋ ಡಾಗ್ ಜನಪ್ರಿಯವಾಯ್ತು.
ಸೆಪ್ಟೆಂಬರ್ನಲ್ಲಿ ಈ ರೊಬೊ ಡಾಗ್ನ ಮತ್ತೊಂದು ವಿಡಿಯೋ ಟ್ವಿಟರ್ನಲ್ಲಿ ಸಖತ್ ವೈರಲ್ ಆಗಿತ್ತು. ತೀರಾ ಇತ್ತೀಚೆಗೆ ಬ್ರಿಸ್ಟಲ್ ವಿಶ್ವವಿದ್ಯಾಲಯದ ಇಂಜಿನಿಯರ್ಗಳೊಂದಿಗೆ ಚೆರ್ನೊಬಿಲ್ ನ್ಯೂಕ್ಲಿಯರ್ ಸ್ಥಾವರದಲ್ಲಿ ಈ ರೊಬೋ ಡಾಗ್ ಕಾಣಿಸಿಕೊಳ್ತು.
1986ರ ಪರಮಾಣು ಅಪಘಾತದಿಂದಾಗಿ ಈ ಪ್ರದೇಶ ಅತ್ಯಂತ ಅಪಾಯಕಾರಿ ಸ್ಥಳವಾಗಿ ಬದಲಾದ್ದರಿಂದ ಇಂಜಿನಿಯರ್ಗಳು ಇದೇ ರೊಬೋಡಾಗ್ ಬಳಸಿ ಈ ಸ್ಥಳದ ಸಮೀಕ್ಷಾ ವರದಿ ತಯಾರಿಸಿದ್ದರು.
ಇದೀಗ 2020 ಅಂತ್ಯಗೊಳ್ಳುವ ಮುನ್ನ ಮತ್ತೊಮ್ಮೆ ಸುದ್ದಿಯಾಗಿದೆ ರೊಬೋ ಡಾಗ್. ಆದರೆ ಈ ಬಾರಿ ರೊಬೋ ಡಾಗ್ ಒಬ್ಬಂಟಿಯಾಗಿ ಸುದ್ದಿಯಾಗಿಲ್ಲ. ಬದಲಾಗಿ ಇತರೆ ಮೂರು ರೊಬೋಟ್ಗಳ ಜೊತೆ ಸೇರಿ ಡು ಯು ಲವ್ ಮಿ ಹಾಡಿಗೆ ಹೆಜ್ಜೆ ಹಾಕಿದೆ.
ರೊಬೊಟಿಕ್ಸ್ ಕಂಪನಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಬಿಡುಗಡೆ ಮಾಡಿದೆ. 2 ನಿಮಿಷ 54 ಸೆಕೆಂಡ್ನ ಈ ವಿಡಿಯೋದಲ್ಲಿ ರೊಬೋಟ್ಗಳು ಅತ್ಯುತ್ತಮವಾಗಿ ಡ್ಯಾನ್ಸ್ ಮಾಡಿದ್ದು ವಿಡಿಯೋ ಸಖತ್ ವೈರಲ್ ಆಗಿದೆ.
;