
ಕಮಲ್ ಹಾಸನ್ ಪುತ್ರಿ ನಟಿ ಹಾಗೂ ಗಾಯಕಿ ಶ್ರುತಿ ಹಾಸನ್ ಮಂಗಳವಾರ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಳೆಯ ಫೋಟೋವೊಂದನ್ನ ಶೇರ್ ಮಾಡುವ ಮೂಲಕ ನೆನಪುಗಳನ್ನ ಮೆಲುಕು ಹಾಕಿದ್ದಾರೆ.
1980ರಲ್ಲಿ ನಟಿ ಸಾರಿಕಾರನ್ನ ವಿವಾಹವಾಗಿದ್ದ ಕಮಲ್ ಹಾಸನ್ಗೆ 1986ರಲ್ಲಿ ಮೊದಲ ಮಗು ಶ್ರುತಿ ಹಾಸನ್ ಜನಿಸಿದ್ದರು, ಇದಾದ ಬಳಿಕ 1991ರಲ್ಲಿ ಅಕ್ಷರಾ ಜನಿಸಿದ್ರು.
ಸೋಮವಾರ ತಮ್ಮ ಅಭಿಮಾನಿಗಳ ಜೊತೆ ಇನ್ಸ್ಟಾಗ್ರಾಂನಲ್ಲಿ ಏನಾದರೂ ಪ್ರಶ್ನೆ ಕೇಳಿ ಎಂದು ಹೇಳಿದ್ದರು. ಇದರಲ್ಲಿ ತಮ್ಮ ನೆಚ್ಚಿನ ಫೋಟೋ ವಿಭಾಗದಲ್ಲಿ ಈ ಫೋಟೋವನ್ನ ಶೇರ್ ಮಾಡಿದ್ದಾರೆ. ಶ್ರುತಿ ಹಾಗೂ ಅಕ್ಷರಾ ಜೊತೆ ಕಮಲ್ ಹಾಸನ್ ಸಾರಿಕಾ ದಂಪತಿ ಇರುವ ಮುದ್ದಾದ ಫೋಟೋ ಇದಾಗಿದೆ.
ನಿಮ್ಮ ತಂದೆಯೊದಿಗೆ ಕ್ಲಿಕ್ಕಿಸಿಕೊಂಡ ಅದ್ಭುತ ಫೋಟೋ ಶೇರ್ ಮಾಡಿ ಎಂಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ನಟಿ ಈ ಫೋಟೋ ಶೇರ್ ಮಾಡಿದ್ದಾರೆ.
ಕಮಲ್ ಹಾಸನ್ ಮೊದಲು ನೃತ್ಯಗಾರ್ತಿ ವಾಣಿ ಗಣಪತಿಯನ್ನ ವಿವಾಹವಾಗಿದ್ದರು. ವಿವಾಹವಾಗಿ 10 ವರ್ಷಗಳ ಬಳಿಕ ಈ ಜೋಡಿ ವಿಚ್ಛೇದನ ಪಡೆದಿತ್ತು.
ಲಾಕ್ಡೌನ್ ಸಮಯದಿಂದ ಶ್ರುತಿ ಹಾಸನ್ ತಮ್ಮ ಬಾಯ್ಫ್ರೆಂಡ್ ಸಂತನು ಹಜಾರಿಕಾ ಜೊತೆ ವಾಸಿಸುತ್ತಿದ್ದಾರೆ. ಸೋಮವಾರ ಮಧ್ಯಾಹ್ನ ಸಂತನು ಹಾಗೂ ತಮ್ಮ ಫೋಟೊಗಳನ್ನ ಶ್ರುತಿ ಹಾಸನ್ ಶೇರ್ ಮಾಡಿದ್ದರು. ಈ ಫೋಟೋಗೆ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯನ್ನ ಹರಿಸಿದ್ದಾರೆ.


https://www.instagram.com/p/CN4k4vMBnYQ/?utm_source=ig_web_copy_link