alex Certify ಟಿಕೆಟ್​ ಮರೆತು ಏರ್​ಪೋರ್ಟ್​ಗೆ ಬಂದ ಶ್ರುತಿ ಹಾಸನ್​..! ಮುಂದೇನಾಯ್ತು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಕೆಟ್​ ಮರೆತು ಏರ್​ಪೋರ್ಟ್​ಗೆ ಬಂದ ಶ್ರುತಿ ಹಾಸನ್​..! ಮುಂದೇನಾಯ್ತು ನೋಡಿ

ನಿನ್ನೆಯಷ್ಟೇ ತಮ್ಮ 35ನೇ ವರ್ಷದ ಜನ್ಮದಿನಾಚರಣೆ ಆಚರಿಸಿಕೊಂಡಿರುವ ನಟಿ ಶೃತಿ ಹಾಸನ್​ ಮುಂಬೈ ಏರ್​ಪೋರ್ಟ್​ನಲ್ಲಿ ಬಾಯ್​ಫ್ರೆಂಡ್​ ಸಂತನು ಹಜಾರಿಕಾ ಜೊತೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ವೈರಲ್​ ಭಯಾನಿ ಇನ್​ಸ್ಟಾಗ್ರಾಂ ಖಾತೆಯಿಂದ ಫೋಟೋಗಳನ್ನ ಶೇರ್​ ಮಾಡಲಾಗಿದ್ದು ಇದರಲ್ಲಿ ನಟಿ ಶ್ರುತಿ ಏರ್​ಪೋರ್ಟ್​ಗೆ ಟಿಕೆಟ್​ನ್ನು ಮರೆತು ಬಂದಂತಿದೆ.

ವಿಡಿಯೋದಲ್ಲಿ ಶ್ರುತಿ ಹಾಸನ್​ ಬಳಿ ಓಡಿ ಬಂದ ಸಂತನು ಆಕೆಯ ಕೈಗೆ ಟಿಕೆಟ್​ ನೀಡಿದ್ದಾನೆ. ಕೂಡಲೇ ಶ್ರುತಿ ಆತನನ್ನ ತಬ್ಬಿಕೊಂಡು ಗುಡ್​ ಬೈ ಹೇಳಿದ್ದಾಳೆ.

ಜನವರಿ 28ರಂದು 35ನೇ ವರ್ಷಕ್ಕೆ ಕಾಲಿಟ್ಟ ನಟಿ ಶ್ರುತಿ ಮುಂಬೈನಲ್ಲಿ ತಮ್ಮ ಗೆಳೆಯ ಸಂತನು ಹಾಗೂ ಗೆಳೆಯರ ಜೊತೆ ಬರ್ತ ಡೇ ಪಾರ್ಟಿ ಆಚರಿಸಿದ್ದರು. ಇಂದು ಮುಂಬೈ ಏರ್​ಪೋರ್ಟ್​ನಲ್ಲಿ ನಟಿ ಶ್ರುತಿ ತಮ್ಮ ಗೆಳೆಯನ ಜೊತೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ಸಂತನು ಡೂಡಲ್​ ಕಲೆಗಾರ ಹಾಗೂ ಇಲ್ಲಸ್ಟ್ರೇಟರ್ ಆಗಿದ್ದಾರೆ. ಶ್ರುತಿ ಹಾಸನ್​ರಂತೆಯೇ ಸಂತನು ಕೂಡ ಸಂಗೀತ ಲೋಕದಲ್ಲಿ ಆಸಕ್ತಿ ಹೊಂದಿದ್ದಾರೆ. ಇವರು ಗುಹಾವಟಿ ಆರ್ಟ್​ ಪ್ರಾಫಿಟ್​ನ ಸಹ ಸಂಸ್ಥಾಪಕ ಕೂಡ ಹೌದು.

View this post on Instagram

A post shared by Viral Bhayani (@viralbhayani)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...