alex Certify ಶಾರುಖ್ ಖಾನ್ ‘ಮನ್ನತ್’ ಮನೆಯಲ್ಲಿ ಸಿನಿಮಾ ಶೂಟಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರುಖ್ ಖಾನ್ ‘ಮನ್ನತ್’ ಮನೆಯಲ್ಲಿ ಸಿನಿಮಾ ಶೂಟಿಂಗ್

Shah Rukh Khan Spotted Filming New Project At His Mannat's Balcony ...

ಮುಂಬೈ: ಕೋವಿಡ್ 19 ಗಲಾಟೆಯಲ್ಲಿ ಲಾಕ್ ಡೌನ್ ಆಗಿದ್ದರಿಂದ ಎಲ್ಲರೂ ಇಷ್ಟು ಸಮಯ ಸುಮ್ಮನೆ ಇದ್ದರು. ಆದರೆ, ಒಂದೊಂದೇ ಸಾರ್ವಜನಿಕ ಕೆಲಸಕ್ಕೆ ಮುಕ್ತವಾದ ಹಾಗೆ ಚಿತ್ರೀಕರಣ ಸಹ ಆರಂಭವಾಗಿದೆ.

ಈಗ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್, ಅವರ ಮನೆ ಮನ್ನತ್ ನಲ್ಲಿ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಅದರ ವಿಡಿಯೋ ಈಗ ವೈರಲ್ ಆಗಿದೆ.

ಆದರೆ, ಇದು ಯಾವ ಸಿನಿಮಾ? ಯಾರು ಯಾರು ಈ ಸಿನಿಮಾದಲ್ಲಿದ್ದಾರೆ? ಯಾವಾಗ ಚಿತ್ರೀಕರಣ ಮುಗಿಯಲಿದೆ? ಎಂಬಿತ್ಯಾದಿ ಮಾಹಿತಿಗಳು ಬಳಿಕವಷ್ಟೇ ತಿಳಿದುಬರಬೇಕಿದೆ. ಶೀಘ್ರದಲ್ಲೇ ಈ ಬಗ್ಗೆ ಶಾರುಖ್ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ವಿಡಿಯೋಗೆ 17k ವೀಕ್ಷಣೆ ಹಾಗೂ 1.9k ಲೈಕ್ ಗಳು ಬಂದಿವೆ.

ಅವರ ಚಿತ್ರೀಕರಣ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಉಣ್ಣೆಯ ಕಪ್ಪು ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಅನ್ನು ಧರಿಸಿದ್ದಾರೆ. ಜೊತೆಗೆ ಎಂದಿನ ಅವರ ಕೈಬೀಸುವ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಅವರು ಈ ವಿಡಿಯೋವನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ, ಮನೆಯಲ್ಲೇ ಸುರಕ್ಷಿತವಾಗಿರಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...