
ಬಾಲಿವುಡ್‌ನ ಖ್ಯಾತ ನಟ ಶಾರುಖ್ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಕೋವಿಡ್-19 ಸೋಂಕಿತರ ನೆರವಿಗೆ ನಿಲ್ಲುವ ಒಳ್ಳೆಯ ಕೆಲಸವೊಂದನ್ನು ಮಾಡಿದ್ದಾರೆ.
ಖಾನ್‌ರ 55ನೇ ಹುಟ್ಟುಹಬ್ಬದ ದಿನವಾದ ನವೆಂಬರ್ 2ರಂದು 5,555 ಮಂದಿಗೆ ಕೋವಿಡ್-19 ಕಿಟ್‌ಗಳು, ಸ್ಯಾನಿಟೈಸರ್‌ಗಳು, ಮುಖದ ಮಾಸ್ಕ್‌ಗಳು ಹಾಗೂ ಆಹಾರದ ವ್ಯವಸ್ಥೆ ಮಾಡಿದ್ದಾರೆ ಅವರ ಅಭಿಮಾನಿಗಳು.
ಶಾರುಖ್ ಅಭಿಮಾನಿಗಳ ಟ್ವಿಟರ್ ಪೇಜ್ ಆಗಿರುವ SRKUniverseನಲ್ಲಿ ಈ ವಿಚಾರವಾಗಿ ಪೋಸ್ಟ್ ಒಂದನ್ನು ಮಾಡಲಾಗಿದ್ದು, ನಟನ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆಗಳು ಬರುತ್ತಿವೆ.