alex Certify ದಂಗಾಗಿಸುತ್ತೆ ʼಪಠಾಣ್ʼ​ ಸಿನಿಮಾಗಾಗಿ ಶಾರೂಕ್​ ಖಾನ್ ಪಡೆದ ಸಂಭಾವನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ʼಪಠಾಣ್ʼ​ ಸಿನಿಮಾಗಾಗಿ ಶಾರೂಕ್​ ಖಾನ್ ಪಡೆದ ಸಂಭಾವನೆ

ಬಾಲಿವುಡ್​ ನಟ ಶಾರೂಕ್​ ಖಾನ್​ ಸಿದ್ಧಾರ್ಥ್ ಆನಂದ್​ರ ಆಕ್ಷನ್​ ಥ್ರಿಲರ್​ ಸಿನಿಮಾ ಮೂಲಕ ಬಾಲಿವುಡ್​ ಸಿನಿ ರಂಗಕ್ಕೆ ಭರ್ಜರಿ ಕಮ್​ ಬ್ಯಾಕ್​​ ಮಾಡೋಕೆ ಸಜ್ಜಾಗ್ತಿದ್ದಾರೆ. ಪಠಾಣ್​ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಗೂ ಜಾನ್​ ಅಬ್ರಾಹಂ ಎಸ್​ಆರ್​ಕೆ ಜೊತೆ ತೆರೆ ಹಂಚಿಕೊಳ್ತಿದ್ದಾರೆ.

ಶಾರೂಕ್​​ ಖಾನ್​ರ ಅಭಿಮಾನಿಗಳು ಬಹಳ ಸಮಯದಿಂದ ಕಿಂಗ್​ ಖಾನ್​​ರ ಮುಂದಿನ ಸಿನಿಮಾಗಾಗಿ ಬೆರಗುಗಣ್ಣಿನಿಂದ ಕಾಯುತ್ತಿದ್ದರು. ಇದೀಗ ಎಸ್​ಆರ್​​ಕೆ ಭರ್ಜರಿ ಕಮ್​ಬ್ಯಾಕ್​ಗೆ ಸಿದ್ಧರಾಗೋದ್ರ ಜೊತೆಯಲ್ಲಿ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರೋ ನಟ ಎಂಬ ಕೀರ್ತಿಯನ್ನೂ ಸಂಪಾದಿಸಿದ್ದಾರೆ.

ಫಿಲಂ ಕ್ರಿಟಿಕ್​ ಉಮೈರ್​ ಸಂಧು ಟ್ವೀಟ್​ನ ಪ್ರಕಾರ ಈ ಸಿನಿಮಾಗಾಗಿ ಶಾರೂಕ್​ ಖಾನ್​ ದಾಖಲೆಯ ಮೊತ್ತದ ಸಂಭಾವನೆ ಅಂದರೆ ಬರೋಬ್ಬರಿ 100 ಕೋಟಿ ರೂಪಾಯಿ ಪಡೀತಿದ್ದಾರೆ.

2021ರ ಆರಂಭದಲ್ಲಿ ಶಾರೂಖ್​ ತಮ್ಮ ಮುಂದಿನ ಸಿನಿಮಾದ ಬಗ್ಗೆ ಘೋಷಣೆ ಮಾಡಿದ್ದರು. ಝೀರೋ ಸಿನಿಮಾದ ಸೋಲಿನ ಬಳಿಕ ಶಾರೂಕ್​ ಖಾನ್​ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...