
ಮದ್ಯ ಡೆಲಿವರಿ ಪೋರ್ಟಲ್ ಒಂದು ತನಗೆ ವಂಚನೆ ಮಾಡಿದ್ದಾಗಿ ಆರೋಪ ಮಾಡಿರುವ ಬಾಲಿವುಡ್ ನಟಿ ಶಬಾನಾ ಅಜ್ಮಿ, ಟ್ವಿಟರ್ ಪೋಸ್ಟ್ ಒಂದರ ಮೂಲಕ ಈ ಕಥೆ ಶೇರ್ ಮಾಡಿದ್ದಾರೆ.
“ಎಚ್ಚರ, ನನಗೆ ಅವರು ವಂಚನೆ ಎಸಗಿದ್ದಾರೆ. ಆರ್ಡರ್‌ಗೆ ಮುಂಚೆಯೇ ಹಣ ಪಾವತಿ ಮಾಡಿದ್ದ ನನಗೆ ಅವರು ಐಟಮ್ ಕಳುಹಿಸದೇ ಇದ್ದಿದ್ದಲ್ಲದೇ ನನ್ನ ಕರೆಗಳನ್ನು ಸ್ವೀಕರಿಸದೇ ಹೋದರು” ಎಂದು ಶಬಾನಾ ಅಜ್ಮಿ ಬರೆದು, ಮದ್ಯ ಖರೀದಿ ವ್ಯವಹಾರದ ವಿವರಗಳನ್ನು ಹಂಚಿಕೊಂಡಿದ್ದಾರೆ.
ಒಂದೇ ಶರ್ಟ್ ನಲ್ಲಿ 264 ಬಾರಿ ಜೂಮ್ ಮೀಟಿಂಗ್ ನಲ್ಲಿ ಮಹಿಳೆ ಭಾಗಿ….! ವಿಡಿಯೋ ವೈರಲ್
ಆದರೆ ಈ ವ್ಯವಹಾರ ಎಷ್ಟು ಮೌಲ್ಯದ್ದು ಹಾಗೂ ಆ ಬಗ್ಗೆ ದೂರು ದಾಖಲಿಸಿದ್ದಾರೆಯೇ ಎಂಬ ವಿಷಯವನ್ನು ಅವರು ಹೇಳಿಕೊಂಡಿಲ್ಲ. ಈ ಹಿಂದೆಯೂ ಅಕ್ಷಯ್ ಖನ್ನಾ, ನರ್ಗಿಸ್ ಫಕ್ರಿ, ಕರಣ್ ಸಿಂಗ್ ಗ್ರೋವರ್‌ರಂಥ ನಟರು ಆನ್ಲೈನ್ ವಂಚನೆಯ ಜಾಲಕ್ಕೆ ಬಿದ್ದಿದ್ದರು.