ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಕೊರೊನಾ ಲಸಿಕೆಯ ಅಭಿಯಾನ ಬಹಳ ಚುರುಕುನಿಂದ ಸಾಗುತ್ತಿದೆ. ನಿನ್ನೆಯಷ್ಟೇ ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟ ಎಲ್ಲರೂ ಏಪ್ರಿಲ್ 1ರಿಂದ ಲಸಿಕೆಯನ್ನ ಹಾಕಿಸಿಕೊಳ್ಳಿ ಎಂದು ಹೇಳಿದೆ. ಪ್ರಸ್ತುತ ದೇಶದಲ್ಲಿ 60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಮೇಲ್ಪಟ್ಟ ಅಸ್ವಸ್ಥರಿಗೆ ಮಾತ್ರ ಲಸಿಕೆಯನ್ನ ನೀಡಲಾಗುತ್ತಿದೆ.
ಜನ ಸಾಮಾನ್ಯರು ಸೆಲೆಬ್ರಿಟಿಗಳೆನ್ನದೇ ಎಲ್ಲರೂ ಕೂಡ ಕೊರೊನಾ ಲಸಿಕೆಯನ್ನ ಹಾಕಿಸಿಕೊಳ್ತಿದ್ದಾರೆ. ಈ ನಡುವೆ ಬಾಲಿವುಡ್ ನಟ ಸಂಜಯ್ ದತ್ ಕೂಡ ಇಂದು ಕೊರೊನಾ ಲಸಿಕೆಯ ಮೊದಲ ಡೋಸ್ನ್ನು ಪಡೆದಿದ್ದಾರೆ. ತಾವು ಲಸಿಕೆ ಪಡೆದಿರುವ ಬಗ್ಗೆ ಖುದ್ದು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುವ ಮೂಲಕ ಮುನ್ನಾಭಾಯ್ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಸಂಜಯ್ ದತ್ ಲಸಿಕೆ ಹಾಕಿಸಿಕೊಳ್ತಿರೋದನ್ನ ನೀವು ನೋಡಬಹುದುಆಗಿದೆ.
ನಾವು ಕೊರೊನಾ ಲಸಿಕೆಯ ಮೊದಲ ಡೋಸ್ನ್ನು ಬಿಕೆಸಿ ಜಂಬೋ ಲಸಿಕಾ ಕೇಂದ್ರದಲ್ಲಿ ಹಾಕಿಸಿಕೊಂಡಿದ್ದೇನೆ. ನಾನು ಡಾ. ಧರೆ ಹಾಗೂ ಅವರ ಟೀಂನ್ನು ಶ್ಲಾಘಿಸಲು ಇಚ್ಚಿಸುತ್ತೇನೆ. ಈ ವೈದ್ಯರ ತಂಡದ ಪರಿಶ್ರಮಕ್ಕೆ ನನ್ನ ಮನಸ್ಸಲ್ಲಿ ತುಂಬಾ ಪ್ರೀತಿ ಹಾಗೂ ಗೌರವ ಇದೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.
ಸಂಜಯ್ ದತ್ಗೂ ಮೊದಲು ಹೇಮಾಮಾಲಿನಿ, ರಾಕೇಶ್ ರೋಷನ್, ಕಮಲ್ ಹಾಸನ್, ಸತೀಶ್ ಷಾ ಸೇರಿದಂತೆ ಅನೇಕ ಗಣ್ಯರು ಕೊರೊನಾ ಲಸಿಕೆಯನ್ನ ಪಡೆದಿದ್ದಾರೆ.