alex Certify ಸಲ್ಮಾನ್ ಖಾನ್ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ: ವೈರಲ್ ಆಯ್ತು ಲೀಕ್ ಆದ ‘ಟೈಗರ್ 3′ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲ್ಮಾನ್ ಖಾನ್ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ: ವೈರಲ್ ಆಯ್ತು ಲೀಕ್ ಆದ ‘ಟೈಗರ್ 3′ ಫೋಟೋ

ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರಸ್ತುತ ರಷ್ಯಾದಲ್ಲಿ ತಮ್ಮ ಬಹು ನಿರೀಕ್ಷಿತ ಚಿತ್ರ ‘ಟೈಗರ್ 3’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅಭಿಮಾನಿಗಳಲ್ಲಿ ಈ ಚಿತ್ರ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ.

ಅಭಿಮಾನಿಗಳಿಗೆ ಮತ್ತೊಂದು ರೋಮಾಂಚಕಾರಿ ಸುದ್ದಿಯಿದೆ. ‘ಟೈಗರ್ 3’ ರ ಫಸ್ಟ್ ಲುಕ್ ರಷ್ಯಾದಿಂದ ಸೋರಿಕೆಯಾಗಿದ್ದು, ಅದು ಈಗ ಇಂಟರ್ನೆಟ್ ಬ್ರೇಕಿಂಗ್ ಆಗಿದೆ. ಸೋರಿಕೆಯಾದ ಚಿತ್ರಗಳಲ್ಲಿ ಸಲ್ಮಾನ್ ಖಾನ್ ಉದ್ದನೆಯ ಹೊಂಬಣ್ಣದ ಕೂದಲು ಮತ್ತು ಗಡ್ಡ ಹೊಂದಿರುವುದನ್ನ ಕಾಣಬಹುದಾಗಿದೆ.

‘ಟೈಗರ್ 3’ ಚಿತ್ರದ ಸಲ್ಮಾನ್ ಖಾನ್ ಅವರ ಫಸ್ಟ್ ಲುಕ್ ನೋಡಿದ ನಂತರ ಅಭಿಮಾನಿಗಳು ಫಿದಾ ಆಗಿದ್ದಾರೆ.

‘ಟೈಗರ್ 3’ ಚಿತ್ರದ ಪ್ರಮುಖ ಜೋಡಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಇತ್ತೀಚೆಗಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಚಿತ್ರದ ಶೂಟಿಂಗ್ ಗಾಗಿ ರಷ್ಯಾಕ್ಕೆ ಹೊರಡುವಾಗ ಕಾಣಿಸಿಕೊಂಡರು.

ಮನೀಶ್ ಶರ್ಮಾ ನಿರ್ದೇಶನದ ‘ಟೈಗರ್ 3’ ತಂಡವು ಸೀಕ್ವೆನ್ಸ್ ಚಿತ್ರೀಕರಣಕ್ಕಾಗಿ ರಷ್ಯಾದಲ್ಲಿದೆ. ಮತ್ತು ಇತ್ತೀಚೆಗೆ ಕಾರ್ ಚೇಸಿಂಗ್ ಸೀಕ್ವೆನ್ಸ್ ಚಿತ್ರೀಕರಿಸಲಾಗಿದೆ. ಸಲ್ಮಾನ್ ಖಾನ್ ಅವರ ಚಿತ್ರಗಳು ಸೋರಿಕೆಯಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...