alex Certify ಲಾಕ್ ಡೌನ್ ನಡುವೆ ಮನೆಗೆ ಮರಳಿದ ಸಲ್ಮಾನ್ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ನಡುವೆ ಮನೆಗೆ ಮರಳಿದ ಸಲ್ಮಾನ್ ಕುಟುಂಬ

ಲಾಕ್ ಡೌನ್ ನಿಂದಾಗಿ ಪನ್ವೇಲ್ ತೋಟದ ಮನೆಯಲ್ಲೇ ಸಿಲುಕಿಕೊಂಡಿದ್ದ ನಟ ಸಲ್ಮಾನ್ ಖಾನ್ ಕುಟುಂಬ ಇದೀಗ ಮುಂಬೈನ ಬಾಂದ್ರಾ ನಿವಾಸಕ್ಕೆ ಮರಳಿದೆ.

ಈ ವಿಷಯವನ್ನು ಸಲ್ಮಾನ್ ಖಾನ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಸಲ್ಮಾನ್ ಅವರ ತಾಯಿ, ಸಹೋದರಿ ಅರ್ಪಿತಾ ಖಾನ್ ಹಾಗೂ ಮಕ್ಕಳು ಮನೆಗೆ ಮರಳಿದ್ದಾರೆ. ಸಲ್ಮಾನ್ ಮಾತ್ರ ಫಾರ್ಮ್ ಹೌಸ್ ನಲ್ಲೇ ಉಳಿದುಕೊಂಡಿದ್ದಾರೆ.

ಮಾರ್ಚ್ ಕೊನೆಯ ವಾರದಲ್ಲಿ ದೇಶವು ಸಂಪೂರ್ಣ ಲಾಕ್ ಡೌನ್ ಆಗುವ ಮುನ್ನ ಸಲ್ಮಾನ್ ಖಾನ್ ಅವರ ಕುಟುಂಬ ಸದಸ್ಯರು ಹಾಗೂ ಆಪ್ತರು ಪನ್ವೇಲ್ ತೋಟದ ಮನೆಗೆ ತೆರಳಿದ್ದರು. ಕೆಲದಿನಗಳ ಮಟ್ಟಿಗೆ ಅಲ್ಲಿ ಇರಬೇಕಾದವರು ಲಾಕ್ ಡೌನ್ ಕಾರಣಕ್ಕೆ ದೀರ್ಘಾವಧಿ ಸಿಲುಕಿಕೊಂಡಿದ್ದರು.

ಸಲ್ಮಾನ್ ತಂದೆ, ಸಹೋದರರಾದ ಅರ್ಬಾಜ್ ಮತ್ತು ಸುಹೈಲ್ ಮಾತ್ರ ಬಾಂದ್ರಾ ನಿವಾಸದಲ್ಲಿ ಉಳಿದಿದ್ದರು. ಇದೀಗ ಸುಮಾರು 40 ದಿನಗಳ ನಂತರ ಅವರ ಕುಟುಂಬ ಮನೆಗೆ ಮರಳಿದೆ.

ಲಾಕ್ ಡೌನ್ ನಡುವೆ ತನ್ನ ಕುಟುಂಬದೊಂದಿಗೆ ಕಳೆದ ಸಂದರ್ಭ ಹಾಗೂ ಮುಂದಿನ ಚಿತ್ರದ ಬಗ್ಗೆ ಸಲ್ಮಾನ್ ಖಾನ್ ಮಾತನಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...