alex Certify ವೈರಲ್ ಆಯ್ತು ಸಲ್ಮಾನ್​ ಖಾನ್ ನಟನೆಯ​ ‘ಅಂತಿಮ್’​ ಸಿನಿಮಾ ಫಸ್ಟ್​​ ಲುಕ್​​.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಆಯ್ತು ಸಲ್ಮಾನ್​ ಖಾನ್ ನಟನೆಯ​ ‘ಅಂತಿಮ್’​ ಸಿನಿಮಾ ಫಸ್ಟ್​​ ಲುಕ್​​.​..!

ಬಾಲಿವುಡ್​ ನಟ ಸಲ್ಮಾನ್​ ಖಾನ್​ ಸೋದರ ಸಂಬಂಧಿ ಆಯುಷ್​ ಶರ್ಮಾ ‘ಅಂತಿಮ್​ : ದಿ ಫೈನಲ್​ ಟ್ರುತ್​’ ಚಿತ್ರದ ವಿಡಿಯೋವೊಂದನ್ನ ಶೇರ್​ ಮಾಡಿದ್ದಾರೆ. ಇದರಲ್ಲಿ 54 ವರ್ಷದ ಸಲ್ಮಾನ್​ ಖಾನ್​ ಸಿಖ್​ ಲುಕ್​​ನಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋ ಹಾಟ್​ ಕೇಕ್​​ನಂತೆ ಸೇಲ್​ ಆಗ್ತಿದೆ.

ತರಕಾರಿ ಮಾರುಕಟ್ಟೆ ಬಳಿ ಸಲ್ಮಾನ್​ ಖಾನ್​ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಇದಾಗಿದ್ದು, ಈ ಚಿತ್ರದಲ್ಲಿ ಸಲ್ಮಾನ್​ ಜೊತೆ ನಟಿಸಿರುವ ಆಯುಷ್​ ಶರ್ಮಾ ವಿಡಿಯೋ ಶೇರ್​ ಮಾಡಿ ಅಂತಿಮ್​ ಪ್ರಾರಂಭವಾಗುತ್ತಿದೆ ಎಂದು ಕ್ಯಾಪ್ಶನ್​ ನೀಡಿದ್ದಾರೆ.

ಆಯುಷ್​ ಶರ್ಮಾ ಟೀಸರ್​ ಶೇರ್​ ಮಾಡಿದ ಕೆಲವೇ ನಿಮಿಷಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳಂತೂ ಸಲ್ಮಾನ್ ನ್ಯೂ ಲುಕ್​ಗೆ ಫಿದಾ ಆಗಿದ್ದಾರೆ.

View this post on Instagram

A post shared by Aayush Sharma (@aaysharma)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...