alex Certify ಮೂರು ಬಾರಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳಂತೆ ಸಲ್ಮಾನ್ ಮಾಜಿ ಪ್ರೇಯಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರು ಬಾರಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳಂತೆ ಸಲ್ಮಾನ್ ಮಾಜಿ ಪ್ರೇಯಸಿ

ಒಂದು ಕಾಲದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರೇಯಸಿಯಾಗಿದ್ದ ಸೋಮಿ ಅಲಿ ಸಂದರ್ಶನವೊಂದರಲ್ಲಿ ಆಘಾತಕಾರಿ ಸುದ್ದಿ ಹೊರ ಹಾಕಿದ್ದಾರೆ. ಬಾಲ್ಯದಲ್ಲಿ ಮೂರು ಬಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸೋಮಿ ಹೇಳಿದ್ದಾರೆ.

ಅನೇಕ ವರ್ಷಗಳ ಕಾಲ ಈ ಸತ್ಯವನ್ನು ನನ್ನಲ್ಲಿಯೇ ಮುಚ್ಚಿಟ್ಟುಕೊಂಡಿದ್ದೆ ಎಂದು ಪಾಕಿಸ್ತಾನದ ನಟಿ ಸೋಮಿ ಅಲಿ ಹೇಳಿದ್ದಾರೆ. ತಂದೆ-ತಾಯಿಯ ಸೂಚನೆ ನಂತ್ರ ಸೋಮಿ ಈ ವಿಷ್ಯವನ್ನು ಯಾರಿಗೂ ಹೇಳಿಲ್ಲವಂತೆ. ಅತ್ಯಾಚಾರಕ್ಕೊಳಗಾದವರ ರಕ್ಷಣೆಗಾಗಿ ಸೋಮಿ ಎನ್ಜಿಒ ನಡೆಸುತ್ತಿದ್ದಾರೆ. ಈಗ ವಿಶ್ವದ ಮುಂದೆ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

ನಾನು ಐದನೇ ವರ್ಷದಲ್ಲಿದ್ದಾಗ ಪಾಕಿಸ್ತಾನದಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದಿತ್ತು. ಈ ಬಗ್ಗೆ ಪಾಲಕರಿಗೆ ಹೇಳಿದ್ದೆ. ಆರೋಪಿ ವಿರುದ್ಧ ಕ್ರಮಕೈಗೊಂಡಿದ್ದರು ಎಂದು ಸೋಮಿ ಹೇಳಿದ್ದಾರೆ. ಆದ್ರೆ ಇಷ್ಟಕ್ಕೇ ನಿಲ್ಲಲಿಲ್ಲ. 9ನೇ ವಯಸ್ಸಿನಲ್ಲಿ ಹಾಗೂ 14ನೇ ವಯಸ್ಸಿನಲ್ಲೂ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸೋಮಿ ಹೇಳಿದ್ದಾರೆ.

ಸುಮಾರು 8 ವರ್ಷಗಳ ಕಾಲ ಸಲ್ಮಾನ್ ಜೊತೆ ಸಂಬಂಧದಲ್ಲಿದ್ದ ಸೋಮಿ, ಮದುವೆಯಾಗ್ತಾರೆಂಬ ಸುದ್ದಿಯಿತ್ತು. ಆದ್ರೆ ಸಲ್ಮಾನ್ ಹಾಗೂ ಬಾಲಿವುಡ್ ಎರಡರಿಂದಲೂ ದೂರವಾದ ಸೋಮಿ, ಎನ್ಜಿಒ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...