ಒಂದು ಕಾಲದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಪ್ರೇಯಸಿಯಾಗಿದ್ದ ಸೋಮಿ ಅಲಿ ಸಂದರ್ಶನವೊಂದರಲ್ಲಿ ಆಘಾತಕಾರಿ ಸುದ್ದಿ ಹೊರ ಹಾಕಿದ್ದಾರೆ. ಬಾಲ್ಯದಲ್ಲಿ ಮೂರು ಬಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸೋಮಿ ಹೇಳಿದ್ದಾರೆ.
ಅನೇಕ ವರ್ಷಗಳ ಕಾಲ ಈ ಸತ್ಯವನ್ನು ನನ್ನಲ್ಲಿಯೇ ಮುಚ್ಚಿಟ್ಟುಕೊಂಡಿದ್ದೆ ಎಂದು ಪಾಕಿಸ್ತಾನದ ನಟಿ ಸೋಮಿ ಅಲಿ ಹೇಳಿದ್ದಾರೆ. ತಂದೆ-ತಾಯಿಯ ಸೂಚನೆ ನಂತ್ರ ಸೋಮಿ ಈ ವಿಷ್ಯವನ್ನು ಯಾರಿಗೂ ಹೇಳಿಲ್ಲವಂತೆ. ಅತ್ಯಾಚಾರಕ್ಕೊಳಗಾದವರ ರಕ್ಷಣೆಗಾಗಿ ಸೋಮಿ ಎನ್ಜಿಒ ನಡೆಸುತ್ತಿದ್ದಾರೆ. ಈಗ ವಿಶ್ವದ ಮುಂದೆ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ನಾನು ಐದನೇ ವರ್ಷದಲ್ಲಿದ್ದಾಗ ಪಾಕಿಸ್ತಾನದಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದಿತ್ತು. ಈ ಬಗ್ಗೆ ಪಾಲಕರಿಗೆ ಹೇಳಿದ್ದೆ. ಆರೋಪಿ ವಿರುದ್ಧ ಕ್ರಮಕೈಗೊಂಡಿದ್ದರು ಎಂದು ಸೋಮಿ ಹೇಳಿದ್ದಾರೆ. ಆದ್ರೆ ಇಷ್ಟಕ್ಕೇ ನಿಲ್ಲಲಿಲ್ಲ. 9ನೇ ವಯಸ್ಸಿನಲ್ಲಿ ಹಾಗೂ 14ನೇ ವಯಸ್ಸಿನಲ್ಲೂ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಸೋಮಿ ಹೇಳಿದ್ದಾರೆ.
ಸುಮಾರು 8 ವರ್ಷಗಳ ಕಾಲ ಸಲ್ಮಾನ್ ಜೊತೆ ಸಂಬಂಧದಲ್ಲಿದ್ದ ಸೋಮಿ, ಮದುವೆಯಾಗ್ತಾರೆಂಬ ಸುದ್ದಿಯಿತ್ತು. ಆದ್ರೆ ಸಲ್ಮಾನ್ ಹಾಗೂ ಬಾಲಿವುಡ್ ಎರಡರಿಂದಲೂ ದೂರವಾದ ಸೋಮಿ, ಎನ್ಜಿಒ ನಡೆಸುತ್ತಿದ್ದಾರೆ.