ಕೋವಿಡ್ ಸೋಂಕಿಗೆ ತತ್ತರಿಸುತ್ತಿರುವ ಜನಸಾಮಾನ್ಯರ ಗೋಳು ಒಂದು ಕಡೆಯಾದರೆ ಸೆಲೆಬ್ರಿಟಿಗಳಿಗೆ ಸೋಂಕು ತಗುಲುವ ವಿಚಾರಗಳು ಮಾಧ್ಯಮಗಳಲ್ಲಿ ರಾಷ್ಟ್ರಮಟ್ಟದ ಸುದ್ದಿಯಾಗುತ್ತಿವೆ.
ಬಾಲಿವುಡ್ ನಟ ಸಲ್ಮಾನ್ ಖಾನ್‌ನ ದತ್ತು ಸಹೋದರಿ ಅರ್ಪಿತಾ ಖಾನ್ ಶರ್ಮಾಗೆ ಕೋವಿಡ್-19 ಪಾಸಿಟಿವ್ ಕಂಡು ಬಂದಿದ್ದು, ಈ ವೇಳೆ ರೋಗದ ಯಾವುದೇ ಲಕ್ಷಣಗಳು ಆಕೆಯಲ್ಲಿ ಕಾಣಿಸಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಖುದ್ದು ಸಲ್ಮಾನ್ ಖಾನ್ ಮಾಧ್ಯಮವೊಂದಕ್ಕೆ ಕೊಟ್ಟ ಸಂದರ್ಶನದ ವೇಳೆ ಖಾತ್ರಿಪಡಿಸಿದ್ದಾರೆ.
ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್: ಹಿರಿಯ ನಟ ರಾಜಾರಾಂ ನಿಧನ
ಅರ್ಪಿತಾ ಕೂಡಾ ಇನ್‌ಸ್ಟಾಗ್ರಾಂನ ತಮ್ಮ ಖಾತೆ ಮೂಲಕ ಸ್ಪಷ್ಟಪಡಿಸಿದ್ದು, ತಮಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು ಸದ್ಯ ಆರಾಮಾಗಿ ಇರುವುದಾಗಿ ತಿಳಿಸಿದ್ದಾರೆ. “ಏಪ್ರಿಲ್ ತಿಂಗಳ ಆರಂಭದಲ್ಲಿ ನಾನು ಕೋವಿಡ್-19 ಪಾಸಿಟಿವ್ ಎಂದು ತಿಳಿದುಕೊಂಡೆ. ಆದರೆ ನನಗೆ ರೋಗದ ಯಾವುದೇ ಲಕ್ಷಣಗಳು ಇರಲಿಲ್ಲ. ಈ ಸಂಬಂಧ ಇದ್ದ ಎಲ್ಲ ಮಾರ್ಗಸೂಚಿಗಳು ಹಾಗೂ ನಿಯಮಗಳನ್ನು ನಾನು ಪಾಲಿಸಿದೆ. ದೇವರ ದಯೆಯಿಂದ ನಾನು ಈಗ ಸಂಪೂರ್ಣ ಚೇತರಿಸಿಕೊಂಡಿದ್ದು, ಕ್ಷೇಮವಾಗಿದ್ದೇನೆ” ಎಂದು ಅರ್ಪಿತಾ ತಿಳಿಸಿದ್ದಾರೆ.