ಸಾವೋ ಸಿನಿಮಾ ಮೂಲಕ ಹೆಚ್ಚು ಹೆಸರು ಪಡೆದ ನಿರ್ದೇಶಕ ಸುಜಿತ್ ತಮ್ಮ ಬಹುದಿನದ ಗೆಳತಿಯೊಂದಿಗೆ ನಿನ್ನೆಯಷ್ಟೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ಜನರಿಲ್ಲದೆ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ವೈದ್ಯೆ ಆಗಿರುವ ಪ್ರವಾಲಿಕಾ ಅವರನ್ನು ಸುಜಿತ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯನ್ನು ಮನೆಯವರ ಬಳಿ ಹೇಳಿಕೊಂಡಿದ್ದಾರೆ ಈ ಜೋಡಿ. ಇವರ ಪ್ರೀತಿಗೆ ಮನೆಯವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ನಿನ್ನೆ ಈ ಜೋಡಿ ಕೇವಲ ಕುಟುಂಬದ ಆಪ್ತರ ಸಮ್ಮುಖದಲ್ಲಿ ಸಿಂಪಲ್ ಆಗಿ ಎಂಗೇಜ್ ಆಗಿದ್ದಾರೆ.
ಇನ್ನು ಈ ಜೋಡಿಯ ಮದುವೆ ದಿನಾಂಕ ಪ್ರಕಟವಾಗಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಸುಜಿತ್ ಹಲವಾರು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಚಿರಂಜೀವಿ ನಟಿಸಲಿರುವ ಮಲಯಾಳಂನ ಲೂಸಿಫರ್ ತೆಲುಗು ಸಿನಿಮಾ ರಿಮೇಕ್ ಆಗುತ್ತಿದ್ದು, ಸುಜಿತ್ ಈ ಸಿನಿಮಾವನ್ನು ನಿರ್ದೇಶನ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.