alex Certify ದರ್ಶನ್ ‘ರಾಬರ್ಟ್’ ರಿಲೀಸ್ ಬಗ್ಗೆ ಚೆನ್ನೈನಲ್ಲಿ ಇಂದು ಮಹತ್ವದ ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದರ್ಶನ್ ‘ರಾಬರ್ಟ್’ ರಿಲೀಸ್ ಬಗ್ಗೆ ಚೆನ್ನೈನಲ್ಲಿ ಇಂದು ಮಹತ್ವದ ಚರ್ಚೆ

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಮಾರ್ಚ್ 11 ರಂದು ಬಿಡುಗಡೆಯಾಗಲಿದ್ದು ಈ ಕುರಿತಾಗಿ ಚೆನ್ನೈನಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಯಲಿದೆ.

‘ರಾಬರ್ಟ್’ ತೆಲುಗು ಆವೃತ್ತಿ ಬಿಡುಗಡೆಗೆ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಸಹಕಾರ ನೀಡಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೆಲುಗು ನಿರ್ಮಾಪಕರ ಪರಿಷತ್ ಗೆ ಪತ್ರ ಬರೆಯಲು ಮುಂದಾಗಿದೆ. ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗಳ ಒಕ್ಕೂಟದ ಸಭೆ ಇಂದು ಚೆನ್ನೈನಲ್ಲಿ ನಡೆಯಲಿದ್ದು ಸಭೆಯಲ್ಲಿ ‘ರಾಬರ್ಟ್’ ತೆಲುಗು ಆವೃತ್ತಿ ರಿಲೀಸ್ ಕುರಿತು ವಿಷಯ ಪ್ರಸ್ತಾಪಿಸಲಾಗುವುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...