alex Certify ‘ಕಾಂತಾರ’ ನಿರೀಕ್ಷೆಗೂ ಮೀರಿದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸಿಹಿ ಸುದ್ದಿ: ‘ಕಾಂತಾರ 2’ಗೆ ರಿಷಭ್ ಶೆಟ್ಟಿ ಸಿದ್ಧತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಂತಾರ’ ನಿರೀಕ್ಷೆಗೂ ಮೀರಿದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸಿಹಿ ಸುದ್ದಿ: ‘ಕಾಂತಾರ 2’ಗೆ ರಿಷಭ್ ಶೆಟ್ಟಿ ಸಿದ್ಧತೆ

ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿದ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕಾಂತಾರ’ ಭರ್ಜರಿ ಯಶಸ್ಸು ಕಂಡಿದೆ. ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ‘ಕಾಂತರಾ’ ಬಳಿಕ ‘ಕಾಂತಾರ 2’ ನಿರ್ಮಾಣ ಮಾಡಲು ಸಿದ್ಧತೆ ನಡೆದಿದೆ.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಕಾರ್ತಿಕ್ ಗೌಡ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಕಾಂತರಾ’ ಯಶಸ್ವಿಯಾಗುವ ವಿಶ್ವಾಸವಿತ್ತು. ಆದರೆ, ಈ ಮಟ್ಟಕ್ಕೆ ಯಶಸ್ಸು ಕಾಣುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ಕುಂದಾಪುರ ರೋಟರಿ ಕಲಾಮಂದಿರದಲ್ಲಿ ಕಾರ್ಟೂನ್ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಟೂನ್ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕಾಂತಾರ’ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದ್ದು, ‘ಕಾಂತಾರ 2’ ಮಾಡುವ ಯೋಚನೆ ಇದೆ. ರಿಷಭ್ ಶೆಟ್ಟಿ ಅವರು ಇದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...