alex Certify ಪೈರಸಿ ವಿರುದ್ಧ ‘ಹೀರೋ’ ರಿಷಬ್ ಶೆಟ್ಟಿ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೈರಸಿ ವಿರುದ್ಧ ‘ಹೀರೋ’ ರಿಷಬ್ ಶೆಟ್ಟಿ ಆಕ್ರೋಶ

ಬೆಂಗಳೂರು: ಮಾರ್ಚ್ 5 ರಂದು ಶುಕ್ರವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಹೀರೋ’ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ.

ರಿಷಬ್ ಶೆಟ್ಟಿ ಅಭಿನಯಿಸಿರುವ ‘ಹೀರೋ’ ಬಿಡುಗಡೆಯಾದಲ್ಲೆಲ್ಲ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಪೈರಸಿ ಹಾವಳಿಯಿಂದ ಚಿತ್ರತಂಡ ಬೇಸರಗೊಂಡಿದೆ.

ರಿಷಬ್ ಶೆಟ್ಟಿ ಅವರು ಈ ಬಗ್ಗೆ ಮಾತನಾಡಿ, ‘ಹೀರೋ’ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ಪೈರಸಿ ಕಾಪಿ ಹರಿದಾಡುತ್ತಿವೆ ಎಂದು ತಿಳಿಸಿದ್ದಾರೆ.

ವೆಬ್ ಸೈಟ್ ಗಳಿಂದ ಪೈರಸಿ ಕಾಪಿಗಳನ್ನು ತೆಗೆಯಲಾಗುತ್ತಿದೆ. ಆದರೆ, ನಿರಂತರವಾಗಿ ಪೈರಸಿ ಹರಿದಾಡುತ್ತಿವೆ. ಹೀಗಾದರೆ, ಚಿತ್ರಮಂದಿರಗಳ ಜವಾಬ್ದಾರಿ ಏನು ಎಂದು ಪ್ರಶ್ನಿಸಿದ್ದಾರೆ. ಮೊಬೈಲ್ ತೆಗೆದುಕೊಂಡು ಚಿತ್ರಮಂದಿರಕ್ಕೆ ಬಂದು ಇಡೀ ಸಿನಿಮಾ ಚಿತ್ರೀಕರಿಸಿ ಅಪ್ಲೋಡ್ ಮಾಡುತ್ತಾರೆ ಎಂದರೆ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...