alex Certify ಬಿಗ್‌ ನ್ಯೂಸ್: ಸುಶಾಂತ್ ಆತ್ಮಹತ್ಯೆ‌ ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆ ನಟಿ ರಿಯಾ ನಾಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ಸುಶಾಂತ್ ಆತ್ಮಹತ್ಯೆ‌ ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆ ನಟಿ ರಿಯಾ ನಾಪತ್ತೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ನಟಿ ರಿಯಾ ಪಿತೂರಿಯಿದೆ ಎನ್ನಲಾಗ್ತಿದೆ. ಬಿಹಾರ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ. ಸುಶಾಂತ್ ತಂದೆ ದೂರು ನೀಡ್ತಿದ್ದಂತೆ ವಕೀಲರನ್ನು ನೇಮಿಸಿಕೊಂಡಿದ್ದ ರಿಯಾ ಈಗ ನಾಪತ್ತೆಯಾಗಿದ್ದಾಳೆ.

ರಿಯಾ ಚಕ್ರವರ್ತಿ ಇದುವರೆಗೂ ಮುಂಬೈನಲ್ಲಿ ವಾಸವಾಗಿದ್ದಳು. ಆದರೆ ಬಿಹಾರ ಪೊಲೀಸರು ಪ್ರಕರಣದ ವಿಚಾರಣೆ ಶುರು ಮಾಡ್ತಿದ್ದಂತೆ ರಿಯಾ ಮನೆಯಿಂದ ನಾಪತ್ತೆಯಾಗಿದ್ದಾಳೆ. ಸುಶಾಂತ್ ಅವರ ತಂದೆ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಪಾಟ್ನಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಫ್‌ಐಆರ್ ದಾಖಲಾದ ಕೂಡಲೇ ಪಾಟ್ನಾ ಪೊಲೀಸ್ ತಂಡ ಮುಂಬೈ ತಲುಪಿದೆ.

ರಿಯಾ ತನ್ನ ಮುಂಬೈ ಮನೆಯಲ್ಲಿ ಇಲ್ಲ ಎನ್ನಲಾಗ್ತಿದೆ. ರಿಯಾ ಮನೆಯಲ್ಲಿರದ ಕಾರಣ ರಿಯಾ ವಿಚಾರಣೆಗೆ ಅಡ್ಡಿಯಾಗ್ತಿದೆ. ಪಾಟ್ನಾ ಪೊಲೀಸರು ಬರಿಗೈನಲ್ಲಿ ವಾಪಸ್ ಆಗುವಂತಾಗಿದೆ. ರಿಯಾ ಮತ್ತೊಂದು ಮನೆ ವಿಳಾಸ ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...