alex Certify ಸ್ಪೈಸ್​ ಜೆಟ್​​ನಿಂದ ಸೋನು ಸೂದ್ ಗೆ ವಿಶೇಷ ಗೌರವ: ಅಪ್ಪ – ಅಮ್ಮ ಇರಬೇಕಿತ್ತು ಎಂದ ಬಾಲಿವುಡ್​ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪೈಸ್​ ಜೆಟ್​​ನಿಂದ ಸೋನು ಸೂದ್ ಗೆ ವಿಶೇಷ ಗೌರವ: ಅಪ್ಪ – ಅಮ್ಮ ಇರಬೇಕಿತ್ತು ಎಂದ ಬಾಲಿವುಡ್​ ನಟ

ಕಳೆದ ವರ್ಷ ಕೊರೊನಾ ವೈರಸ್​ ಹಾಗೂ ಲಾಕ್​ಡೌನ್​ ಸಂಕಷ್ಟದ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗಾಗಿ ಬಾಲಿವುಡ್​ ನಟ ಸೋನು ಸೂದ್​ ಮಾಡಿದ ಸಹಾಯವನ್ನ ಯಾರೂ ಮರೆಯುವಂತಿಲ್ಲ. ಮುಂಚೂಣಿ ಕೆಲಸಗಾರರಿಗೆ, ವಲಸೆ ಕಾರ್ಮಿಕರಿಗೆ, ವಿದ್ಯಾರ್ಥಿಗಳು ಹಾಗೂ ರೋಗಿಗಳ ಪಾಲಿಗೆ ಸೋನು ಸೂದ್​ ನಿಜವಾದ ಹೀರೋ ಎನಿಸಿಕೊಂಡಿದ್ದರು.

ಸೋನು ಸೂದ್​ರ ಈ ಮಾನವೀಯ ಕಾರ್ಯಗಳನ್ನ ಗಮನಿಸಿದ ಏರ್​ಲೈನ್​ ಸಂಸ್ಥೆ ಸ್ಪೈಸ್​ ಜೆಟ್​​ ಗೌರವಾರ್ಥವಾಗಿ ಸ್ಪೈಸ್​ಜೆಟ್​ ಬೋಯಿಂಗ್​ 737 ವಿಮಾನದಲ್ಲಿ ಸೋನು ಸೂದ್​​ರ ದೊಡ್ಡ ಫೋಟೋವನ್ನ ಹಾಕಿಸಿದೆ. ಅಲ್ಲದೇ ರಕ್ಷಕ ಸೋನು ಸೂದ್​ಗೆ ಧನ್ಯವಾದ ಎಂದು ವಿಮಾನದ ಮೇಲೆ ಬರೆಯಲಾಗಿದೆ. ಈ ಮೂಲಕ ಇಂತಹದ್ದೊಂದು ವಿಶೇಷ ಗೌರವ ಪಡೆದ ದೇಶದ ಮೊದಲ ನಟ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಸ್ಪೈಸ್​ಜೆಟ್​ನ ಈ ಗೌರವಾರ್ಥದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಖುಷಿಯನ್ನ ಸೋನುಸೂದ್​ ಹಂಚಿಕೊಂಡಿದ್ದಾರೆ. ಈ ಗೌರವವು ಮುಂಗಡ ಟಿಕೆಟ್​ ಪಡೆಯದೇ ಮೋಗಾದಿಂದ ಮುಂಬೈಗೆ ನಾನು ಮಾಡಿದ್ದ ಪ್ರಯಾಣವನ್ನ ನೆನಪಿಸುತ್ತಿದೆ. ನನ್ನ ಪೋಷಕರನ್ನ ನಾನಿಂದು ತುಂಬಾನೇ ಮಿಸ್​ ಮಾಡಿಕೊಳ್ತಿದ್ದೇನೆ. ಈ ಗೌರವಕ್ಕಾಗಿ ಸ್ಪೈಸ್​ಜೆಟ್​ಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by Sonu Sood (@sonu_sood)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...