alex Certify ರಾಧೆ‌ ಫಿಲ್ಮ್‌ನ ‘ಸೀಟಿ ಮಾರ್…..’ ಹಾಡಿಗೆ ಕುಣಿದು ಕುಪ್ಪಳಿಸಿದ ಡಾಕ್ಟರ್ಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಧೆ‌ ಫಿಲ್ಮ್‌ನ ‘ಸೀಟಿ ಮಾರ್…..’ ಹಾಡಿಗೆ ಕುಣಿದು ಕುಪ್ಪಳಿಸಿದ ಡಾಕ್ಟರ್ಸ್….!

ಸಾಕಷ್ಟು ಟೀಕೆಯ ವಿಮರ್ಶೆಗೆ ಒಳಗಾಗಿರುವ ಮತ್ತು ಹೆಚ್ಚೆಚ್ಚು ಟ್ರೋಲ್‌ಗೊಳಗಾಗಿರುವ ಸಲ್ಮಾನ್ ಖಾನ್, ದಿಶಾ ಪಟಾನಿ, ರಂದೀಪ್ ಹೂಡಾ, ಮತ್ತು ಜಾಕಿ ಶ್ರಾಫ್ ಅಭಿನಯದ ‘ರಾಧೆ’ ಚಿತ್ರದ ಹಾಡಿಗೆ ವೈದ್ಯರ ತಂಡವೊಂದು ಸ್ಟೆಪ್ ಹಾಕಿರುವ ವಿಡಿಯೋ‌ ಸಖತ್ ವೈರಲ್ ಆಗಿದೆ.

ಈ ವಿಡಿಯೋವನ್ನು ನಟಿ ದಿಶಾ ಪಟಾನಿ ಅಭಿಮಾನಿಗಳು ಹುಟ್ಟುಹಾಕಿರುವ ಟೀಮ್ ದಿಶಾ ಪಟಾಣಿ ಪೇಜ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.

ಸೀಟಿ ಮಾರ್ ಹಾಡಿಗೆ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ದಿಶಾ ಪಟಾಣಿ‌ ಜಬರ್ದಸ್ತ್ ಸ್ಟೆಪ್ ಹಾಕಿದ್ದಾರೆ. ಅದೇ ರೀತಿ ವೈದ್ಯರು ಗುಂಪು ತಮ್ಮ‌ ಸಮವಸ್ತ್ರದಲ್ಲೇ ಮಾಸ್ಕ್ ಧರಿಸಿದ್ದಂತೆಯೇ ಲೀಲಾಜಾಲವಾಗಿ ಹೆಜ್ಜೆ ಹಾಕಿದರೆ, ಒಬ್ಬರು ಮ್ಯಾಂಡೊಲಿನ್ ನುಡಿಸುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಒಂದೇ ಮಂಟಪದಲ್ಲಿ ಅಕ್ಕ, ತಂಗಿಯರನ್ನು ಮದುವೆಯಾಗಿದ್ದ ಭೂಪ ಅರೆಸ್ಟ್

ಕೋವಿಡ್ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರು ಉತ್ಸಾಹ ತುಂಬಿಕೊಳ್ಳಲು ವಿವಿಧ ಕಸರತ್ತು ಮಾಡುತ್ತಿರುತ್ತಾರೆ. ಈ ವೈದ್ಯರು ಜಬರ್ ದಸ್ತ್ ಸ್ಟೆಪ್ ಹಾಕುವ ಮೂಲಕ ತಮ್ಮೊಳಗಿನ ಒತ್ತಡವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಖುಷಿಪಟ್ಟಿದ್ದಾರೆ. ಅನೇಕರು ವೈದ್ಯರಿಗೆ ಕೃತಜ್ಞತೆ ಸಲ್ಲಿಸಿ ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...