ನಟ ರಣಬೀರ್ ಕಪೂರ್ ತನ್ನ ಸಹೋದರಿ ರಿಧಿಮಾ ಕಪೂರ್ ಹುಟ್ಟುಹಬ್ಬದ ಆಚರಣೆಗಾಗಿ ಸ್ಟೆಪ್ ಹಾಕಿ ರಂಗು ತಂದಿದ್ದಾರೆ. ಈ ಮೂಲಕ ತಮ್ಮ ಸಹೋದರಿಯ ನಲವತ್ತನೇ ಹುಟ್ಟುಹಬ್ಬವನ್ನು ವಿಶೇಷಗೊಳಿಸಿದ್ದಾರೆ.
ಅವರಷ್ಟೇ ಅಲ್ಲದೆ, ಆಲಿಯಾ ಭಟ್ ಮತ್ತು ನೀತು ಕಪೂರ್ ಸೇರಿ ಕುಟುಂಬದ ಸದಸ್ಯರು ‘ಆಪ್ ಜೈಸಾ ಕೊಯಿ’ ಹಾಡಿಗೆ ಹೆಜ್ಜೆ ಹಾಕಿದ್ದು, ತನ್ನ ಕುಟುಂಬವು ಹುಟ್ಟುಹಬ್ಬದ ಸಂದರ್ಭದಲ್ಲಿ ವಿಶೇಷ ಗಿಫ್ಟ್ ನೀಡಿದೆ ಎಂದು ರಿಧಿಮಾ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ರಿದ್ಧಿಮಾ ಅವರ ಪತಿ ಭಾರತ್ ಸಾಹ್ನಿ, ಆದರ್ ಜೈನ್, ಅರ್ಮಾನ್ ಜೈನ್ ಮತ್ತು ಕುಟುಂಬದ ಇತರ ಸದಸ್ಯರು ಸಹ ಈ ಸಂಭ್ರಮದ ಭಾಗವಾಗಿದ್ದಾರೆ. ರಣಬೀರ್-ಆಲಿಯಾ ಅವರು ನೀಲಿ ಬಣ್ಣದ ಬಟ್ಟೆ ಧರಿಸಿ ಒಟ್ಟಿಗೆ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ. ಹುಟ್ಟುಹಬ್ಬ ಆಚರಣೆಯ ಫೋಟೋಗಳು ಸಹ ವೈರಲ್ ಆಗಿದೆ.
https://www.instagram.com/tv/CFIeZCKDTmD/?utm_source=ig_embed