ಕೆಲ ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಟ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ತಮ್ಮ ಮೊದಲ ಕರ್ವಾ ಚೌತ್ ಸೆಲೆಬ್ರೇಟ್ ಮಾಡಿದ್ದಾರೆ. ಮಿಹಿಕಾ ತಾಯಿ ಬಂಟಿ ಬಜಾಜ್ ಈ ಜೋಡಿಯಾ ಕರ್ವಾ ಚೌತ್ ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಆಗಸ್ಟ್ 8ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಕರೊನಾ ಹಿನ್ನೆಲೆ ಅತ್ಯಾಪ್ತರಿಗಷ್ಟೇ ಆಮಂತ್ರಣ ನೀಡಲಾಗಿತ್ತು. ಹೀಗಾಗಿ ಮದುವೆಯಲ್ಲಿ ಕೇವಲ 30 ಮಂದಿ ಮಾತ್ರ ಭಾಗಿಯಾಗಿದ್ರು. ಆದರೆ ಮಿಹಿಕಾ ಹಾಗೂ ರಾಣಾ ಮದುವೆ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿತ್ತು.
ಬಂಟಿ ಬಜಾಜ್ ಶೇರ್ ಮಾಡಿರುವ ಫೋಟೋದಲ್ಲಿ ಕೆಂಪು ಬಣ್ಣದ ಸೀರೆಯಲ್ಲಿ ಸಖತ್ ಆಗಿ ಕಾಣುತ್ತಿದ್ದಾರೆ. ಮಗಳು – ಅಳಿಯನ ಫೋಟೋ ಪೋಸ್ಟ್ ಮಾಡಿರುವ ಬಂಟಿ, ಕರ್ವಾಚೌತ್ ಶುಭಾಶಯ. ರಾಣಾ ದಗ್ಗುಬಾಟಿ ಹಾಗೂ ಮಿಹಿಕಾಗೂ ದೇವರು ಆಶೀರ್ವದಿಸಲಿ ಅಂತಾ ಬರೆದುಕೊಂಡಿದ್ದಾರೆ.