ರಮಾನಂದ ಸಾಗರ್ ಅವರ ಪ್ರಸಿದ್ಧ ʼರಾಮಾಯಣʼ ಧಾರಾವಾಹಿ ಇದೀಗ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ಕೊಡೋಕೆ ಸಜ್ಜಾಗಿದೆ. ಈ ಬಗ್ಗೆ ಸೀತಾ ಪಾತ್ರದಲ್ಲಿ ಮಿಂಚಿದ್ದ ದೀಪಿಕಾ ಚಿಖ್ಲಿಯಾ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ವೀಕ್ಷಕರ ಒತ್ತಾಯದ ಮೇರೆಗೆ ಬರೋಬ್ಬರಿ 33 ವರ್ಷಗಳ ಬಳಿಕ ರಾಮಾಯಣವನ್ನ ಡಿಡಿ ನ್ಯಾಷನಲ್ ಚಾನೆಲ್ನಲ್ಲಿ ಪ್ರಸಾರ ಮಾಡಲಾಗಿತ್ತು. ಲಾಕ್ಡೌನ್ ಸಂದರ್ಭದಲ್ಲಿ ಈ ರಾಮಾಯಣ ಧಾರಾವಾಹಿ ಮರುಪ್ರಸಾರ ಭಾರೀ ಸದ್ದು ಮಾಡಿತ್ತು.
ಈ ಧಾರಾವಾಹಿ ಮೊಟ್ಟ ಮೊದಲ ಬಾರಿಗೆ 1987-1988ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಲಾಕ್ಡೌನ್ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯತೆ ಬಂದೊದಗಿದ ಸಂದರ್ಭದಲ್ಲಿ ಈ ಧಾರಾವಾಹಿಯನ್ನ ಮರು ಪ್ರಸಾರ ಮಾಡಲಾಗಿತ್ತು.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಈ ಸಿಹಿಸುದ್ದಿಯನ್ನ ಬಿಚ್ಚಿಟ್ಟಿರುವ ದೀಪಿಕಾ, ಈ ವರ್ಷವೂ ಕೂಡ ರಾಮಾಯಣ ಕಿರುತೆರೆಯಲ್ಲಿ ಮರುಪ್ರಸಾರವಾಗ್ತಿದೆ ಎಂದು ತಿಳಿಸೋಕೆ ತುಂಬಾನೇ ಖುಷಿಯಾಗ್ತಿದೆ. ಇತಿಹಾಸ ಮತ್ತೊಮ್ಮೆ ಮರುಕಳಿಸುತ್ತಿದೆ. ಈ ಧಾರಾವಾಹಿ ಕೇವಲ ನನಗೊಬ್ಬಳಿಗೆ ಮಾತ್ರವಲ್ಲದೇ ಬಹುತೇಕ ಭಾರತೀಯ ಕುಟುಂಬಗಳ ಜೀವನದ ಭಾಗವಾಗಿದೆ. ನೀವು ಕೂಡ ನಮ್ಮ ಪಂಗಡಕ್ಕೆ ಸೇರಿಕೊಂಡು ರಾಮಾಯಣದಿಂದ ಜ್ಞಾನವನ್ನ ಪಡೆಯೋಣ ಎಂದು ಬರೆದುಕೊಂಡಿದ್ದಾರೆ.
ರಾಮಾಯಣ ಧಾರಾವಾಹಿಯಲ್ಲಿ ಅರುಣ್ ಗೋವಿಲ್, ದೀಪಿಕಾ ಚಿಖ್ಲಿಯಾ ಹಾಗೂ ಸುನೀಲ್ ಲಹ್ರಿ ಕ್ರಮವಾಗಿ ರಾಮ, ಸೀತೆ ಹಾಗೂ ಲಕ್ಷ್ಮಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ 1987ರ ಕಾಲದ ಈ ಐತಿಹಾಸಿಕ ಶೋ ಸ್ಟಾರ್ ಭಾರತ್ ಚಾನೆಲ್ನಲ್ಲಿ ಪ್ರತಿ ದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.
https://www.instagram.com/p/CNrrwGPJRnf/?utm_source=ig_web_copy_link