ಬಾಲಿವುಡ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ ಅಕ್ಷಯ್ ಕುಮಾರ್ರ ಬಹು ನಿರೀಕ್ಷಿತ ಸಿನಿಮಾ ‘ರಾಮ್ ಸೇತು’ ಅಯೋಧ್ಯೆಯಲ್ಲಿ ಮುಹೂರ್ತ ಕಂಡಿದೆ. ಅಭಿಷೇಕ್ ಶರ್ಮಾ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನಿಮಾದಲ್ಲಿ ರಾಮ ಕಥಾವಸ್ತು ಆಗಿರೋದ್ರಿಂದ ಈ ಸಿನಿಮಾದ ಮುಹೂರ್ತವನ್ನ ಅಯೋಧ್ಯೆಯಲ್ಲೇ ನೆರವೇರಿಸಲಾಗಿದೆ. ಸಿನಿಮಾ ಮುಹೂರ್ತದ ಫೋಟೋಗಳನ್ನ ನಟ ಅಕ್ಷಯ್ ಕುಮಾರ್ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಬಾಲಿವುಡ್ ಖಿಲಾಡಿಗೆ ಜೋಡಿಯಾಗಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನುಶ್ರತ್ ಭಾರುಚ್ಚಾ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಸೇತುವಿನಲ್ಲಿ ಅಕ್ಷಯ್ ಕುಮಾರ್ ಪುರಾತತ್ವ ಶಾಸ್ತ್ರಜ್ಞನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾದ ಬಹುತೇಕ ಶೂಟಿಂಗ್ ಮುಂಬೈ ಹಾಗೂ ಅಯೋಧ್ಯೆಯಲ್ಲಿ ನಡೆಯಲಿದೆ ಎಂದು ಸಿನಿ ತಂಡ ಹೇಳಿದೆ. ಮುಂದಿನ ವರ್ಷದ ದೀಪಾವಳಿ ವೇಳೆಗೆ ಈ ಸಿನಿಮಾ ಅಭಿಮಾನಿಗಳ ಮುಂದಿಡಲು ಚಿತ್ರತಂಡ ಶ್ರಮ ವಹಿಸುತ್ತಿದೆ.
https://www.instagram.com/p/CMjjtLQHGCu/?utm_source=ig_web_copy_link