ಬಾಲಿವುಡ್ ನಟಿ ರಾಖಿ ಸಾವಂತ್ ಬಿಗ್ಬಾಸ್ ಸೀಸನ್ನಲ್ಲಿ ಭಾಗಿಯಾದ ಬಳಿಕ ಹೆಚ್ಚು ಸುದ್ದಿಯಲ್ಲಿ ಇದ್ದಾರೆ. ಏಪ್ರಿಲ್ 19ನೇ ತಾರೀಖಿನಂದು ತಮ್ಮ ತಾಯಿ ಕ್ಯಾನ್ಸರ್ನ ಸಂಬಂಧಿ ಸರ್ಜರಿಯೊಂದನ್ನ ಪೂರೈಸಿದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನ ನೀಡಿದ್ದರು, ಇದಾದ ಬಳಿಕ ಜಯಾ ಸಾವಂತ್ ಮಾರಕ ಕಾಯಿಲೆಯಿಂದ ಕ್ರಮೇಣವಾಗಿ ಚೇತರಿಸಿಕೊಳ್ತಿದ್ದಾರೆ. ಇದೀಗ ತಮ್ಮ ತಾಯಿ ಆಸ್ಪತ್ರೆಯ ಕಾರಿಡಾರ್ನಲ್ಲಿ ನಡೆಯಲು ಯತ್ನಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋವನ್ನ ರಾಖಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನ ಶೇರ್ ಮಾಡಿರುವ ರಾಖಿ, ಆಸ್ಪತ್ರೆಯಲ್ಲಿ ಅಮ್ಮನ ಮಾರ್ಜಾಲ ನಡಿಗೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನೋಡಿದ ರಾಖಿ ಫ್ಯಾನ್ಸ್ ಕಮೆಂಟ್ ವಿಭಾಗದಲ್ಲಿ ಜಯಾ ಸಾವಂತ್ ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಬಿಗ್ಬಾಸ್ ಸೀಸನ್ 14 ಖ್ಯಾತಿಯ ರಾಖಿ ಸಾವಂತ್ ತಮ್ಮ ತಾಯಿಯ ಶಸ್ತ್ರಚಿಕಿತ್ಸೆಯ ಬಳಿಕ ಸಲ್ಮಾನ್ ಖಾನ್ ಹಾಗೂ ಸೊಹೇಲ್ ಖಾನ್ಗೆ ಸೋಶಿಯಲ್ ಮೀಡಿಯಾ ಮೂಲಕ ಧನ್ಯವಾದ ಅರ್ಪಿಸಿದ್ದರು. ನನ್ನ ತಾಯಿಯನ್ನ ಬಚಾವ್ ಮಾಡಿದ ಸಲ್ಮಾನ್ ಹಾಗೂ ಸೊಹೇಲ್ ಸಹೋದರರಿಗೆ ಧನ್ಯವಾದ ಎಂದು ಹೇಳಿದ್ದರು.
ನಾನು ಸಲ್ಮಾನ್ ಖಾನ್ರಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ಹಣವಿಲ್ಲದೇ ಜೀವನ ಸಾಗಿಸೋದು ಹೇಗೆ..? ನಾನು ಹೀಗೆ ಸತ್ತು ಹೋಗ್ತೇನಾ ಅಂತೆಲ್ಲ ಜೀಸಸ್ ಬಳಿ ಕೇಳ್ತಿದ್ದೆ. ಆದರೆ ಜೀಸಸ್ ಏಂಜಲ್ನ ರೀತಿಯಲ್ಲಿ ಸಲ್ಮಾನ್ ಖಾನ್ರನ್ನ ನಮ್ಮ ಜೀವನದಲ್ಲಿ ಕಳುಹಿಸಿಕೊಟ್ಟಿದ್ದಾರೆ. ನನ್ನ ಪರ ನಿಂತಿರುವ ಸಲ್ಮಾನ್ ಖಾನ್ ನನ್ನ ಆಪರೇಷನ್ ಮಾಡಿಸುತ್ತಿದ್ದಾರೆ ಎಂದು ರಾಖಿ ಸಾವಂತ್ ತಾಯಿ ಜಯಾ ಸಾವಂತ್ ಕೂಡ ಹೇಳಿದ್ದರು.
ಬಿಗ್ಬಾಸ್ ಮನೆಯಲ್ಲಿ ಇದ್ದಾಗಲೇ ರಾಖಿ ಸಾವಂತ್ ತಮ್ಮ ತಾಯಿಯ ವೈದ್ಯಕೀಯ ಸವಾಲುಗಳ ಬಗ್ಗೆ ಮಾತನಾಡಿದ್ದರು. ರಾಖಿ ಸಾವಂತ್ ಬಿಗ್ಬಾಸ್ ಸೀಸನ್ನಿಂದ 14 ಲಕ್ಷ ರೂ. ಪಡೆದಿದ್ದಾರೆ. ಈ ಹಣವನ್ನ ತಾಯಿಯ ಚಿಕಿತ್ಸೆಗೆ ಖರ್ಚು ಮಾಡೋದಾಗಿ ರಾಖಿ ಹೇಳಿಕೊಂಡಿದ್ದರು.
https://www.instagram.com/p/CN7Gwxon23k/?utm_source=ig_web_copy_link