
ಆರೋಗ್ಯ ತಪಾಸಣೆಗೆಂದು ಅಮೆರಿಕದ ಮಯೋ ಕ್ಲಿನಿಕ್ಗೆ ತೆರಳಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅಲ್ಲಿಂದ ಹೊರಬಂದಿದ್ದಾರೆ. ರಜನಿಕಾಂತ್ ಜೊತೆಯಲ್ಲಿ ಪುತ್ರಿ ಐಶ್ವರ್ಯಾ ಧನುಷ್ ಸಹ ಇದ್ದಾರೆ. ನಟ ರಜನಿಕಾಂತ್ ಹಾಗೂ ಅವರ ಪತ್ನಿ ಲತಾ ರಜನಿಕಾಂತ್ ಜೊತೆ ದುಬೈ ಮಾರ್ಗವಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದರು.
ನಿಯಮಿತ ಆರೋಗ್ಯ ತಪಾಸಣೆಗಾಗಿ ರಜನಿಕಾಂತ್ ಮಯೋ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ರಜನಿಕಾಂತ್ 2016ರಲ್ಲಿ ಮೂತ್ರಪಿಂಡದ ಕಸಿ ಚಿಕಿತ್ಸೆ ಮಾಡಿಸಿಕೊಂಡಿದ್ದರು.
ಜೂನ್ 19ರಂದು ರಜನಿಕಾಂತ್ ದಂಪತಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ವೈದ್ಯಕೀಯ ಕಾರಣಕ್ಕಾಗಿ ಅಮೆರಿಕಕ್ಕೆ ತೆರಳಲು ಸರ್ಕಾರದ ಬಳಿ ವಿಶೇಷ ಅನುಮತಿ ಪಡೆದಿದ್ದರು. ಇನ್ನು ಶೂಟಿಂಗ್ ಕಾರಣಕ್ಕಾಗಿ ಧನುಷ್, ಅವರ ಪತ್ನಿ ಐಶ್ವರ್ಯ ಹಾಗೂ ಮಕ್ಕಳು ಸಹ ಅಮೆರಿಕದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಈ ಕಾರಣಕ್ಕೆ ಪಾಕ್ ನೆಟ್ಟಿಗರ ಮನಗೆದ್ದಿದೆ ಪಂಜಾಬ್ ಬಟ್ಟೆ ಅಂಗಡಿ..!
ಇತ್ತೀಚೆಗೆ ರಜನಿಕಾಂತ್ ಹಾಗೂ ಅವರ ಪುತ್ರಿ ಐಶ್ವರ್ಯಾ ಅಮೆರಿಕದ ಮಯೋ ಕ್ಲಿನಿಕ್ನಿಂದ ಹೊರಬರುತ್ತಿದ್ದ ವೇಳೆ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಹರಿದಾಡುತ್ತಿದ್ದಂತೆಯೇ ಅಭಿಮಾನಿಗಳು ರಜನಿಕಾಂತ್ರ ಆರೋಗ್ಯ ಕ್ಷೇಮವಾಗಿರಲಿ ಎಂದು ಹಾರೈಸಿದ್ದಾರೆ.
