ಬ್ರಿಟನ್ ಮೂಲದ ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ರಾಜ್ ಕುಂದ್ರಾರನ್ನ ಬಂಧಿಸಿರುವ ಮುಂಬೈ ಪೊಲೀಸರು ಜುಲೈ 23ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆಯೇ ಸಿನಿ ಇಂಡಸ್ಟ್ರಿಯ ಅನೇಕರು ತಮ್ಮದೇ ಆರೋಪಗಳನ್ನ ಮಾಡುತ್ತಿದ್ದಾರೆ.
ವಿವಾದದ ಮೂಲಕವೇ ಹೆಚ್ಚು ಸುದ್ದಿಯಲ್ಲಿರುವ ಮಾಡೆಲ್ ಪೂನಮ್ ಪಾಂಡೆ ಹಾಗೂ ಶೆರ್ಲಿನ್ ಚೋಪ್ರಾ ಕೂಡ ಈ ಪ್ರಕರಣದ ಸಂಬಂಧ ಕೆಲ ಆರೋಪಗಳನ್ನ ಮಾಡಿದ್ದಾರೆ. ಇದರ ಜೊತೆಯಲ್ಲಿ ಯುಟ್ಯೂಬರ್ ಪುನೀತ್ ಕಛರ್ ಸಹ ಕುಂದ್ರಾ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
2019ರಲ್ಲಿ ನಾನು ಆಫ್ಟರ್ ಮೀ ಎಂಬ ಅಪ್ಲಿಕೇಶನ್ ಜೊತೆ ಕೆಲಸ ಮಾಡಿದ್ದೆ. ಒಪ್ಪಂದದ ವೇಳೆಯಲ್ಲಿ ನಾನು ಈ ಆ್ಯಪ್ ಮಾಲೀಕರ ಜೊತೆ ಆದಾಯ ಹಂಚಿಕೆಯ ಬಗ್ಗೆಯೂ ಮಾತನಾಡಿದ್ದೆ. ಆದರೆ ಒಪ್ಪಂದದ ಪ್ರಕಾರ ಆದಾಯ ಹಂಚಿಕೆ ಆಗುತ್ತಿಲ್ಲ ಎಂಬುದು ನನಗೆ ತಿಳಿದ ಬಳಿಕ ನಾನು ಈ ಒಪ್ಪಂದದಿಂದ ಹೊರನಡೆದಿದ್ದೆ. ನಾನು ಈ ವ್ಯವಹಾರದಿಂದ ಹೊರಬಂದ ಬಳಿಕವೂ ನನ್ನ ವಿಡಿಯೋ ಹಾಗೂ ಫೋಟೋಗಳನ್ನ ಅಪ್ಲಿಕೇಶನ್ನಲ್ಲಿ ಪೋಸ್ಟ್ ಮಾಡುವ ಕೆಲಸವನ್ನ ಮುಂದುವರಿಸಿದ್ದರು ಎಂದು ಪೂನಂ ಪಾಂಡೆ ಹೇಳಿದ್ದಾರೆ.
ಮತ್ತೊಬ್ಬ ಮಾಡೆಲ್ ಸಾಗ್ರಿಕಾ, ರಾಜ್ ಕೂಡ ಭಾಗಿಯಾಗಿದ್ದ ಆಡಿಷನ್ ಒಂದರ ಬಗ್ಗೆ ಮಾತನಾಡಿದ್ದಾರೆ. ಆಡಿಷನ್ ವೇಳೆ ನನ್ನ ಬಳಿ ಬೆತ್ತಲೆಯಾಗಿ ವಾಟ್ಸಾಪ್ ಮೂಲಕ ವಿಡಿಯೋ ಚಾಟ್ ಮಾಡುವಂತೆ ಹೇಳಲಾಗಿತ್ತು. ಅಲ್ಲದೇ ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಯನ್ನೂ ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಯುಟ್ಯೂಬರ್ ಪುನೀತ್ ಕೌರ್ ಕೂಡ ಇನ್ಸ್ಟಾಗ್ರಾಂನಲ್ಲಿ ಕೇಸ್ ಸಂಬಂಧದ ಕೆಲವು ಕ್ಲಿಪ್ಗಳನ್ನು ಶೇರ್ ಮಾಡಿದ್ದಾರೆ.
ಶೆರ್ಲಿನ್ ಚೋಪ್ರಾ ನೀಡಿರುವ ಹೇಳಿಕೆಯ ಪ್ರಕಾರ, ಅವರು ರಾಜ್ ಜೊತೆಯಲ್ಲಿ 15 ರಿಂದ 20 ಪ್ರಾಜೆಕ್ಟ್ಗಳನ್ನ ಮಾಡಿದ್ದಾರೆ. ಇದಕ್ಕಾಗಿ ಆಕೆಗೆ ರಾಜ್ ಕುಂದ್ರಾ ಪ್ರತಿ ಪ್ರಾಜೆಕ್ಟ್ಗೆ 30 ಲಕ್ಷ ರೂಪಾಯಿಯಂತೆ ಹಣ ಪಾವತಿ ಮಾಡಿದ್ದಾರೆ ಎನ್ನಲಾಗಿದೆ.