alex Certify
ಕನ್ನಡ ದುನಿಯಾ
       

Kannada Duniya

BIG NEWS: ರಾಜ್​ ಕುಂದ್ರಾ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪೂನಂ ಪಾಂಡೆ, ಶೆರ್ಲಿನ್​ ಚೋಪ್ರಾ..!

ಬ್ರಿಟನ್​ ಮೂಲದ ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ರಾಜ್​ ಕುಂದ್ರಾರನ್ನ ಬಂಧಿಸಿರುವ ಮುಂಬೈ ಪೊಲೀಸರು ಜುಲೈ 23ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆಯೇ ಸಿನಿ ಇಂಡಸ್ಟ್ರಿಯ ಅನೇಕರು ತಮ್ಮದೇ ಆರೋಪಗಳನ್ನ ಮಾಡುತ್ತಿದ್ದಾರೆ.

ವಿವಾದದ ಮೂಲಕವೇ ಹೆಚ್ಚು ಸುದ್ದಿಯಲ್ಲಿರುವ ಮಾಡೆಲ್​ ಪೂನಮ್​ ಪಾಂಡೆ ಹಾಗೂ ಶೆರ್ಲಿನ್​ ಚೋಪ್ರಾ ಕೂಡ ಈ ಪ್ರಕರಣದ ಸಂಬಂಧ ಕೆಲ ಆರೋಪಗಳನ್ನ ಮಾಡಿದ್ದಾರೆ. ಇದರ ಜೊತೆಯಲ್ಲಿ ಯುಟ್ಯೂಬರ್​​ ಪುನೀತ್​ ಕಛರ್​ ಸಹ ಕುಂದ್ರಾ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

2019ರಲ್ಲಿ ನಾನು ಆಫ್ಟರ್​ ಮೀ ಎಂಬ ಅಪ್ಲಿಕೇಶನ್​​ ಜೊತೆ ಕೆಲಸ ಮಾಡಿದ್ದೆ. ಒಪ್ಪಂದದ ವೇಳೆಯಲ್ಲಿ ನಾನು ಈ ಆ್ಯಪ್​ ಮಾಲೀಕರ ಜೊತೆ ಆದಾಯ ಹಂಚಿಕೆಯ ಬಗ್ಗೆಯೂ ಮಾತನಾಡಿದ್ದೆ. ಆದರೆ ಒಪ್ಪಂದದ ಪ್ರಕಾರ ಆದಾಯ ಹಂಚಿಕೆ ಆಗುತ್ತಿಲ್ಲ ಎಂಬುದು ನನಗೆ ತಿಳಿದ ಬಳಿಕ ನಾನು ಈ ಒಪ್ಪಂದದಿಂದ ಹೊರನಡೆದಿದ್ದೆ. ನಾನು ಈ ವ್ಯವಹಾರದಿಂದ ಹೊರಬಂದ ಬಳಿಕವೂ ನನ್ನ ವಿಡಿಯೋ ಹಾಗೂ ಫೋಟೋಗಳನ್ನ ಅಪ್ಲಿಕೇಶನ್​ನಲ್ಲಿ ಪೋಸ್ಟ್​ ಮಾಡುವ ಕೆಲಸವನ್ನ ಮುಂದುವರಿಸಿದ್ದರು ಎಂದು ಪೂನಂ ಪಾಂಡೆ ಹೇಳಿದ್ದಾರೆ.

ಮತ್ತೊಬ್ಬ ಮಾಡೆಲ್​ ಸಾಗ್ರಿಕಾ, ರಾಜ್​​​ ಕೂಡ ಭಾಗಿಯಾಗಿದ್ದ ಆಡಿಷನ್​ ಒಂದರ ಬಗ್ಗೆ ಮಾತನಾಡಿದ್ದಾರೆ. ಆಡಿಷನ್​ ವೇಳೆ ನನ್ನ ಬಳಿ ಬೆತ್ತಲೆಯಾಗಿ ವಾಟ್ಸಾಪ್​ ಮೂಲಕ ವಿಡಿಯೋ ಚಾಟ್​ ಮಾಡುವಂತೆ ಹೇಳಲಾಗಿತ್ತು. ಅಲ್ಲದೇ ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಯನ್ನೂ ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಯುಟ್ಯೂಬರ್​ ಪುನೀತ್​ ಕೌರ್​​ ಕೂಡ ಇನ್​ಸ್ಟಾಗ್ರಾಂನಲ್ಲಿ ಕೇಸ್​ ಸಂಬಂಧದ ಕೆಲವು ಕ್ಲಿಪ್​ಗಳನ್ನು ಶೇರ್​ ಮಾಡಿದ್ದಾರೆ.

ಶೆರ್ಲಿನ್​ ಚೋಪ್ರಾ ನೀಡಿರುವ ಹೇಳಿಕೆಯ ಪ್ರಕಾರ, ಅವರು ರಾಜ್​ ಜೊತೆಯಲ್ಲಿ 15 ರಿಂದ 20 ಪ್ರಾಜೆಕ್ಟ್​ಗಳನ್ನ ಮಾಡಿದ್ದಾರೆ. ಇದಕ್ಕಾಗಿ ಆಕೆಗೆ ರಾಜ್​ ಕುಂದ್ರಾ ಪ್ರತಿ ಪ್ರಾಜೆಕ್ಟ್​ಗೆ 30 ಲಕ್ಷ ರೂಪಾಯಿಯಂತೆ ಹಣ ಪಾವತಿ ಮಾಡಿದ್ದಾರೆ ಎನ್ನಲಾಗಿದೆ.

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...