alex Certify ಜನವರಿ 8ರಂದು ಅಮೆಜಾನ್​ ಪ್ರೈಮ್​​ನಲ್ಲಿ ಮಾಧವನ್​ ನಟನೆಯ ‘ಮಾರ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿ 8ರಂದು ಅಮೆಜಾನ್​ ಪ್ರೈಮ್​​ನಲ್ಲಿ ಮಾಧವನ್​ ನಟನೆಯ ‘ಮಾರ’

ಬಾಲಿವುಡ್​ ನಟ ಆರ್​. ಮಾಧವನ್​ ಅಭಿನಯದ ತಮಿಳು ಚಿತ್ರ ಮಾರ ಜನವರಿ 8ರಂದು ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ರಿಲೀಸ್​ ಆಗಲಿದೆ. ಈ ಚಿತ್ರದಲ್ಲಿ ಸ್ಯಾಂಡಲ್​ವುಡ್​ ನಟಿ ಶ್ರದ್ಧಾ ಶ್ರೀನಾಥ್​ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದರ ಜೊತೆಯಲ್ಲಿ ಶಿವಾಡಾ, ಮೌಲಿ, ಅಲೆಕ್ಸಾಂಡರ್​ ಬಾಬು, ಎಂ.ಎಸ್. ಭಾಸ್ಕರ್, ಗುರು ಸೋಮಸುಂದರಂ, ಕಿಶೋರ್​ ಹಾಗೂ ಅಬಿರಾಮಿ ಪ್ರಮುಖ ಪಾತ್ರದಲ್ಲಿದ್ದಾರೆ.

ಈ ಚಿತ್ರವು 2015ರಲ್ಲಿ ತೆರೆ ಕಂಡ ಮಲಯಾಳಂ ಹಿಟ್​ ಚಿತ್ರ ಚಾರ್ಲಿಯ ರಿಮೇಕ್​ ಆಗಿದೆ. ಚಾರ್ಲಿ ಸಿನಿಮಾದಲ್ಲಿ ದುಲ್ಕರ್​ ಸಲ್ಮಾನ್​ ಹಾಗೂ ಪಾರ್ವತಿ ಮೆನನ್ ನಟಿಸಿದ್ದರು.

ಇನ್ನು ಈ ಸಂಬಂಧ ಅಮೆಜಾನ್​ ಪ್ರೈಮ್​ ತನ್ನ ಅಧಿಕೃತ ಟ್ವಿಟರ್​ ಪೇಜ್​ನಲ್ಲಿ ಮಾಹಿತಿ ಹಂಚಿಕೊಂಡಿದೆ. ನಾವು ಈಗಾಗಲೇ ಈ ಕಾಲ್ಪನಿಕ ಕತೆಯನ್ನ ಪ್ರೀತಿಸುತ್ತಿದ್ದೇವೆ. ಜನವರಿ 8,2021ರಂದು ಮಾರನನ್ನ ಭೇಟಿಯಾಗಿ ಎಂದು ಬರೆದುಕೊಂಡಿದ್ದಾರೆ.

ನಟಿ ಶ್ರದ್ಧಾ ಶ್ರೀನಾಥ್​ ಹಾಗೂ ಮಾಧವನ್​ ಕೂಡ ಸಿನಿಮಾ ರಿಲೀಸ್​ ಬಗ್ಗೆ ಟ್ವಿಟರ್​ ಖಾತೆಗಳಲ್ಲಿ ಮಾಹಿತಿ ಶೇರ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...