alex Certify ಬಾಲಿವುಡ್​ ನಿರ್ಮಾಪಕ ಫಿರೋಜ್​ ಪತ್ನಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ ನಿರ್ಮಾಪಕ ಫಿರೋಜ್​ ಪತ್ನಿ ಅರೆಸ್ಟ್

ಅಕ್ರಮ ಗಾಂಜಾ ಸಂಗ್ರಹ ಆರೋಪದಡಿಯಲ್ಲಿ ಬಾಲಿವುಡ್​ ನಿರ್ಮಾಪಕ ಫಿರೋಜ್​ ನಾಡಿಯಾದ್ವಾಲಾ ಪತ್ನಿ ಬಂಧನಕ್ಕೊಳಗಾಗಿದ್ದಾರೆ. ಮುಂಬೈ ಎನ್​ಸಿಬಿ ಕಾರ್ಯಾಚರಣೆ ವೇಳೆ 10 ಗ್ರಾಂ ಮರಿಜುವಾನಾ ಪತ್ತೆಯಾಗಿತ್ತು.

ಅಕ್ರಮ ಗಾಂಜಾ ಸಂಗ್ರಹ ಆರೋಪದಡಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಫೀರೋಜ್​ರಿಗೆ ಮಾದಕ ವಸ್ತು ನಿಗ್ರಹ ದಳದಿಂದ ಸಮನ್ಸ್ ನೀಡಲಾಗಿತ್ತು. ಆದರೂ ಅವರು ಕಚೇರಿಗೆ ಹಾಜರಾಗಿರಲಿಲ್ಲ.

ಇದೀಗ ಅವರ ಪತ್ನಿಯನ್ನ ಬಂಧಿಸಲಾಗಿದ್ದು ತನಿಖೆ ನಡೆಸುತ್ತಿದ್ದೇವೆ ಅಂತಾ ಎನ್​​ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್​ ವಾಂಖೆಡೆ ಮಾಹಿತಿ ನೀಡಿದ್ದಾರೆ.

ಅಕ್ರಮ ಗಾಂಜಾ ಮಾರಾಟ ಆರೋಪದಡಿ ಜೈಲು ಪಾಲಾಗಿರುವ ವಾಹಿದ್​​ ಅಬ್ದುಲ್​ ಖಾದಿರ್​ ಶೇಖ್ ಸುಲ್ತಾನ್​​ರಿಂದ ಈ ಗಾಂಜಾ ಖರೀದಿ ಮಾಡಲಾಗಿದೆ ಎಂಬ ಅಂಶ ತನಿಖೆ ವೇಳೆ ತಿಳಿದು ಬಂದಿದೆ.

ಪ್ರಕರಣ ಸಂಬಂಧ ಫಿರೋಜ್​ ನಾಡಿಯಾದ್ವಾಲಾ ಪತ್ನಿ ಶಬಾನಾ ಸಯೀದ್​ ಹೇಳಿಕೆ ದಾಖಲಿಸಿಕೊಂಡ ಬಳಿಕ ಸೆಕ್ಷನ್​ 67ರ ಅಡಿಯಲ್ಲಿ ಬಂಧಿಸಲಾಗಿದೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...