
ಬಾಹುಬಲಿ ಮೂಲಕ ಅಖಿಲ ಭಾರತ ಮಟ್ಟದ ಸ್ಟಾರ್ ಆಗಿರುವ ಪ್ರಭಾಸ್ ಈಗ ಹಾಲಿವುಡ್‌ಗೆ ಎಂಟ್ರಿ ಕೊಡುವ ಮಾತುಗಳು ಕೇಳಿ ಬರುತ್ತಿವೆ.
ಟಾಮ್ ಕ್ರೂಸ್‌ರ ’ಮಿಶನ್ ಇಂಪಾಸಿಬಲ್ 7’ ಎಂಬ ಹೆಸರಿನ ಆಕ್ಷನ್ ಚಿತ್ರದಲ್ಲಿ ಪ್ರಭಾಸ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಅಂತೆಕಂತೆಗಳು ಬಲವಾಗಿ ಹಬ್ಬಿವೆ. ಆದರೆ ಈ ಕುರಿತಂತೆ ಖುದ್ದು ’ಮಿಶನ್ ಇಂಪಾಸಿಬಲ್ 7’ ತಂಡದಿಂದ ಯಾವುದೇ ಖಾತ್ರಿ ಬಂದಿಲ್ಲ.
ಅಂಗಡಿ ಮಾಲೀಕ – ಕಳ್ಳನ ನಡುವಿನ ಸಂಭಾಷಣೆ ವೈರಲ್
ಚಿತ್ರದ ನಿರ್ದೇಶಕ ಕ್ರಿಸ್ಟೋಫರ್ ಮಕ್‌ಕ್ವಾರ‍್ರಿ ಅವರು ಪ್ರಭಾಸ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ ಎಂಬ ವರದಿಗಳು ಸುದ್ದಿಯಲ್ಲಿವೆ.
ಪ್ರಸವ ವೇದನೆಯಲ್ಲಿದ್ದ ಮಹಿಳೆಗೆ ’ಮೀಟಿಂಗ್ ಮುಗಿಸಿ ಹೋಗಿ’ ಎಂದ ಉದ್ಯಮಿ
ತಮ್ಮ ನಟನೆಯ ’ರಾಧೆ ಶ್ಯಾಮ್’ ಚಿತ್ರದ ಶೂಟಿಂಗ್‌ಗಾಗಿ ಇಟಲಿಯಲ್ಲಿರುವ ಪ್ರಭಾಸ್, ಇದೇ ವೇಳೆ ’ಎಂಐ7’ ಚಿತ್ರತಂಡವನ್ನು ಭೇಟಿ ಮಾಡಿದ್ದಾರೆ ಎಂದು ವರದಿಗಳು ತೂರಿ ಬರುತ್ತಿದ್ದು, ಈ ಪಿಚ್ಚರ್‌ನಲ್ಲಿ ಪಾತ್ರವಹಿಸಲು ಪ್ರಭಾಸ್ ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ.

