alex Certify ಪೊಲೀಸರೊಂದಿಗೆ ಪತಿ ಬರ್ತಿದ್ದಂತೆ ಶಿಲ್ಪಾ ಶೆಟ್ಟಿ ಮಾಡಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರೊಂದಿಗೆ ಪತಿ ಬರ್ತಿದ್ದಂತೆ ಶಿಲ್ಪಾ ಶೆಟ್ಟಿ ಮಾಡಿದ್ದೇನು ಗೊತ್ತಾ….?

ಅಶ್ಲೀಲ ವಿಡಿಯೋ ಪ್ರಕರಣದ ವಿಚಾರಣೆ ಸಂಬಂಧ ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ರಾಜ್​ ಕುಂದ್ರಾ ಜೊತೆ ಶುಕ್ರವಾರ ಶಿಲ್ಪಾ ಶೆಟ್ಟಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಟಿ ಶಿಲ್ಪಾ ಶೆಟ್ಟಿ ಯಾವ ರೀತಿ ವರ್ತಿಸಿದ್ರು ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್​ ಕುಂದ್ರಾರನ್ನ ನೋಡುತ್ತಿದ್ದಂತೆಯೇ ಶಿಲ್ಪಾ ಶೆಟ್ಟಿಯ ದುಃಖದ ಕಟ್ಟೆ ಒಡೆದಿದ್ದು ಪೊಲೀಸರ ಎದುರೇ ಶಿಲ್ಪಾ ಶೆಟ್ಟಿ ಪತಿಯ ಎದುರು ಕಿರುಚಾಡಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಅಲ್ಲದೇ ಹಾಟ್​ಶಾಟ್​ ಜೊತೆ ಯಾವುದೇ ಸಂಪರ್ಕ ಇಲ್ಲ ಎಂದು ವಿಚಾರಣೆ ವೇಳೆ ಶಿಲ್ಪಾ ಶೆಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಪೊಲೀಸರ ಸಮ್ಮುಖದಲ್ಲೇ ಪತಿಯ ಜೊತೆ ಮಾತನಾಡಿದ ಶಿಲ್ಪಾ ಶೆಟ್ಟಿ, ಈ ಪ್ರಕರಣದಿಂದಾಗಿ ಇಡೀ ಕುಟುಂಬಕ್ಕೆ ಕೆಟ್ಟ ಹೆಸರು ಬಂದಿದೆ. ನಾವು ಸಾಕಷ್ಟು ಮುಖಭಂಗ ಅನುಭವಿಸುತ್ತಿದ್ದೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

6 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ರಾಜ್​​ ಕುಂದ್ರಾ ಪತ್ನಿಯ ಎದುರು ಈ ಪ್ರಕರಣದಲ್ಲಿ ನಾನು ಶಾಮೀಲು ಆಗಿಲ್ಲವೆಂದೂ ತಾವು ಅಶ್ಲೀಲ ವಿಡಿಯೋವನ್ನ ಮಾಡಿಲ್ಲ. ಬದಲಾಗಿ ಶೃಂಗಾರ ವಿಡಿಯೋ ಮಾಡಿದ್ದಾಗಿ ಹೇಳಿದ್ದಾರೆ. ಕಾನೂನಿನ ಅಡಿಯಲ್ಲಿ ನನ್ನ ಮೇಲೆ ಕೇಸ್​ ನಿಲ್ಲೋದಿಲ್ಲ ಎಂತಲೂ ರಾಜ್​ ಕುಂದ್ರಾ ಹೇಳಿದ್ದಾರಂತೆ.

ವಿಚಾರಣೆ ಬಳಿಕ ಮಾತನಾಡಿದ ಮುಂಬೈ ಪೊಲೀಸ್​ ಅಧಿಕಾರಿ, ಈ ಪ್ರಕರಣದಲ್ಲಿ ಶಿಲ್ಪಾಶೆಟ್ಟಿಯ ಪಾತ್ರ ಯಾವುದರಲ್ಲೂ ಕಂಡುಬಂದಿಲ್ಲ. ಹೀಗಾಗಿ ಅವರನ್ನ ನಾವು ಇನ್ಮುಂದೆ ವಿಚಾರಣೆಗೆ ಒಳಪಡಿಸೋದಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...