ಅಶ್ಲೀಲ ವಿಡಿಯೋ ಪ್ರಕರಣದ ವಿಚಾರಣೆ ಸಂಬಂಧ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ರಾಜ್ ಕುಂದ್ರಾ ಜೊತೆ ಶುಕ್ರವಾರ ಶಿಲ್ಪಾ ಶೆಟ್ಟಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಟಿ ಶಿಲ್ಪಾ ಶೆಟ್ಟಿ ಯಾವ ರೀತಿ ವರ್ತಿಸಿದ್ರು ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ ಕುಂದ್ರಾರನ್ನ ನೋಡುತ್ತಿದ್ದಂತೆಯೇ ಶಿಲ್ಪಾ ಶೆಟ್ಟಿಯ ದುಃಖದ ಕಟ್ಟೆ ಒಡೆದಿದ್ದು ಪೊಲೀಸರ ಎದುರೇ ಶಿಲ್ಪಾ ಶೆಟ್ಟಿ ಪತಿಯ ಎದುರು ಕಿರುಚಾಡಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಅಲ್ಲದೇ ಹಾಟ್ಶಾಟ್ ಜೊತೆ ಯಾವುದೇ ಸಂಪರ್ಕ ಇಲ್ಲ ಎಂದು ವಿಚಾರಣೆ ವೇಳೆ ಶಿಲ್ಪಾ ಶೆಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಪೊಲೀಸರ ಸಮ್ಮುಖದಲ್ಲೇ ಪತಿಯ ಜೊತೆ ಮಾತನಾಡಿದ ಶಿಲ್ಪಾ ಶೆಟ್ಟಿ, ಈ ಪ್ರಕರಣದಿಂದಾಗಿ ಇಡೀ ಕುಟುಂಬಕ್ಕೆ ಕೆಟ್ಟ ಹೆಸರು ಬಂದಿದೆ. ನಾವು ಸಾಕಷ್ಟು ಮುಖಭಂಗ ಅನುಭವಿಸುತ್ತಿದ್ದೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
6 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ರಾಜ್ ಕುಂದ್ರಾ ಪತ್ನಿಯ ಎದುರು ಈ ಪ್ರಕರಣದಲ್ಲಿ ನಾನು ಶಾಮೀಲು ಆಗಿಲ್ಲವೆಂದೂ ತಾವು ಅಶ್ಲೀಲ ವಿಡಿಯೋವನ್ನ ಮಾಡಿಲ್ಲ. ಬದಲಾಗಿ ಶೃಂಗಾರ ವಿಡಿಯೋ ಮಾಡಿದ್ದಾಗಿ ಹೇಳಿದ್ದಾರೆ. ಕಾನೂನಿನ ಅಡಿಯಲ್ಲಿ ನನ್ನ ಮೇಲೆ ಕೇಸ್ ನಿಲ್ಲೋದಿಲ್ಲ ಎಂತಲೂ ರಾಜ್ ಕುಂದ್ರಾ ಹೇಳಿದ್ದಾರಂತೆ.
ವಿಚಾರಣೆ ಬಳಿಕ ಮಾತನಾಡಿದ ಮುಂಬೈ ಪೊಲೀಸ್ ಅಧಿಕಾರಿ, ಈ ಪ್ರಕರಣದಲ್ಲಿ ಶಿಲ್ಪಾಶೆಟ್ಟಿಯ ಪಾತ್ರ ಯಾವುದರಲ್ಲೂ ಕಂಡುಬಂದಿಲ್ಲ. ಹೀಗಾಗಿ ಅವರನ್ನ ನಾವು ಇನ್ಮುಂದೆ ವಿಚಾರಣೆಗೆ ಒಳಪಡಿಸೋದಿಲ್ಲ ಎಂದು ಹೇಳಿದ್ದಾರೆ.