ತಮ್ಮ ಗರ್ಭಾವಸ್ಥೆಯ ಜೀವನದ ಅನುಭವನ್ನ ಹಂಚಿಕೊಳ್ಳಲು ಕರೀನಾ ಕಪೂರ್ ಬರೆದಿರುವ ಪುಸ್ತಕ ಇದೀಗ ವಿವಾದಕ್ಕೆ ನಾಂದಿ ಹಾಡಿದೆ. ಕರೀನಾ ಕಪೂರ್ ತಮ್ಮ ಪುಸ್ತಕಕ್ಕೆ ಬೈಬಲ್ ಎಂದು ಹೆಸರಿಟ್ಟ ಕಾರಣ ಕ್ರಿಶ್ಚಿಯನ್ ಸಮುದಾಯದವರು ಮಹಾರಾಷ್ಟ್ರದಲ್ಲಿ ದೂರನ್ನ ದಾಖಲಿಸಿದ್ದಾರೆ.
ಆಲ್ಫಾ ಒಮೆಗಾ ಕ್ರಿಶ್ಚಿಯನ್ ಮಹಾಸಂಘ ಅಧ್ಯಕ್ಷ ಆಶಿಷ್ ಶಿಂಧೆ ಎಂಬವರು ಶಿವಾಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ಪ್ರೆಗ್ಸೆನ್ಸಿ ಬೈಬಲ್ ಲೇಖಕರಾದ ಕರೀನಾ ಕಪೂರ್ ಹಾಗೂ ಅದಿತಿ ಶಾ ಭಿಂಜಾನಿ ಹೆಸರನ್ನ ಉಲ್ಲೇಖಿಸಲಾಗಿದೆ.
ಬೈಬಲ್ ಕ್ರಿಶ್ಚಿಯನ್ ಧರ್ಮದ ಪವಿತ್ರ ಗ್ರಂಥವಾಗಿದ್ದು ಇದನ್ನ ಕರಿನಾ ಕಪೂರ್ ತಮ್ಮ ಪುಸ್ತಕದ ಹೆಸರಾಗಿ ಬಳಕೆ ಮಾಡಿರೋದು ಕ್ರಿಶ್ಚಿಯನ್ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಶಿವಾಜಿನಗರ ಠಾಣಾ ಇನ್ಚಾರ್ಜ್ ಇನ್ಸ್ಪೆಕ್ಟರ್ ಸೈನಾಥ್ ಥೋಂಬ್ರೆ, ಈ ಸಂಬಂಧ ನಾವು ದೂರನ್ನ ಸ್ವೀಕರಿಸಿದ್ದೇವೆ. ಆದರೆ ಇಲ್ಲಿಯವರೆಗೆ ಎಫ್ಐಆರ್ ದಾಖಲು ಮಾಡಿಲ್ಲ ಎಂದು ಹೇಳಿದ್ರು.
ಬಾಲಿವುಡ್ ನಟಿ ಕರೀನಾ ಕಪೂರ್ ಜುಲೈ 9ರಂದು ತಾವು ಪುಸ್ತಕ ಬಿಡುಗಡೆ ಮಾಡುತ್ತಿರುವ ವಿಚಾರವನ್ನ ಬಹಿರಂಗಪಡಿಸಿದ್ದರು, 40 ವರ್ಷದ ಈ ನಟಿ ಕೆಲ ತಿಂಗಳ ಹಿಂದಷ್ಟೇ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.