alex Certify ʼಟ್ರೋಲ್ʼ‌ ಮಾಡಿದವರಿಗೆ ಬಾಯ್ಮುಚ್ಚಿ ಎಂದ ತಾಪ್ಸಿ ಪನ್ನು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಟ್ರೋಲ್ʼ‌ ಮಾಡಿದವರಿಗೆ ಬಾಯ್ಮುಚ್ಚಿ ಎಂದ ತಾಪ್ಸಿ ಪನ್ನು

ಬಾಲಿವುಡ್​ ನಟಿ ತಾಪ್ಸಿ ಪನ್ನು ಕೊರೊನಾ ಸೋಂಕಿತರಿಗೆ ಸಹಾಯ ಮಾಡುವ ಸಲುವಾಗಿ ಮಾಡಿದ ಟ್ವೀಟ್​​ಗಾಗಿ ಟ್ರೋಲ್​ಗೆ ಒಳಗಾಗಿದ್ದರು. ಆಮ್ಲಜನಕ ಕೊರತೆ, ಔಷಧಿ ಸೇರಿದಂತೆ ಇತರೆ ಸೌಕರ್ಯಗಳಿಗಾಗಿ ತಾಪ್ಸಿ ಟ್ವಿಟರ್​ ಮೂಲಕ ಮನವಿ ಮಾಡ್ತಿದ್ದಾರೆ. ಎಲ್ಲದರ ನಡುವೆ ತಮ್ಮನ್ನ ಸಸ್ಥಿ ಎಂದು ಕರೆದ ಟ್ರೋಲಿಗರಿಗೆ ತಾಪ್ಸಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಟ್ರೋಲ್​​ಗೆ ಪ್ರತಿಕ್ರಿಯಿಸಿದ ನಟಿ ತಾಪ್ಸಿ ಪನ್ನು, ನೀವು ಬಾಯಿ ಮುಚ್ಚಿಕೊಂಡು ಕೂರಲು ಸಾಧ್ಯವಾಗಬಹುದೇ..? ನೀವು ಇಂತಹದ್ದೇ ಮಾತುಗಳನ್ನ ಆಡುವವರಾಗಿದ್ದರೆ ನಮ್ಮ ದೇಶ ಮೊದಲಿನಂತೆಯೇ ಸಾಮಾನ್ಯವಾಗಿ ಉಸಿರಾಡುವವರೆಗೆ ನೀವು ಬಾಯಿ ಮುಚ್ಚಿಕೊಂಡಿರಿ. ನಿಮ್ಮ ಮೂರ್ಖತನದಿಂದ ನನ್ನ ಕೆಲಸಗಳಿಗೆ ಅಡ್ಡಿಯಾಗಬಾರದು. ನನಗೆ ನನ್ನ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಬರೆದಿದ್ದಾರೆ.

ಆಸ್ಪತ್ರೆಯಲ್ಲೇ ಮದುವೆ ಮಾಡಿಕೊಂಡ ‘ಕೊರೊನಾ’ ಸೋಂಕಿತ….!

ತಾಪ್ಸಿಯನ್ನ ಟ್ರೋಲ್​ ಮಾಡಲು ಮುಂದಾಗಿದ್ದವರು ಇದೀಗ ಆ ಟ್ವೀಟ್​ನ್ನು ಡಿಲೀಟ್​ ಮಾಡಿದ್ದಾರೆ. ಕೇವಲ ಟ್ವೀಟ್​ ಮಾಡೋದ್ರ ಮೂಲಕ ತಾಪ್ಸಿ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆಯೇ..? ಇತರರ ಸಹಾಯಕ್ಕಾಗಿ ತಮ್ಮ ಐಷಾರಾಮಿ ಕಾರುಗಳನ್ನ ಬಿಟ್ಟುಕೊಡಲು ತಯಾರಿದ್ದಾರೆಯೇ ಎಂದು ಕೇಳಿದ್ದರು.

— taapsee pannu (@taapsee) April 26, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...