ʼಟ್ರೋಲ್ʼ ಮಾಡಿದವರಿಗೆ ಬಾಯ್ಮುಚ್ಚಿ ಎಂದ ತಾಪ್ಸಿ ಪನ್ನು 26-04-2021 8:30PM IST / No Comments / Posted In: Latest News, Entertainment ಬಾಲಿವುಡ್ ನಟಿ ತಾಪ್ಸಿ ಪನ್ನು ಕೊರೊನಾ ಸೋಂಕಿತರಿಗೆ ಸಹಾಯ ಮಾಡುವ ಸಲುವಾಗಿ ಮಾಡಿದ ಟ್ವೀಟ್ಗಾಗಿ ಟ್ರೋಲ್ಗೆ ಒಳಗಾಗಿದ್ದರು. ಆಮ್ಲಜನಕ ಕೊರತೆ, ಔಷಧಿ ಸೇರಿದಂತೆ ಇತರೆ ಸೌಕರ್ಯಗಳಿಗಾಗಿ ತಾಪ್ಸಿ ಟ್ವಿಟರ್ ಮೂಲಕ ಮನವಿ ಮಾಡ್ತಿದ್ದಾರೆ. ಎಲ್ಲದರ ನಡುವೆ ತಮ್ಮನ್ನ ಸಸ್ಥಿ ಎಂದು ಕರೆದ ಟ್ರೋಲಿಗರಿಗೆ ತಾಪ್ಸಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಟ್ರೋಲ್ಗೆ ಪ್ರತಿಕ್ರಿಯಿಸಿದ ನಟಿ ತಾಪ್ಸಿ ಪನ್ನು, ನೀವು ಬಾಯಿ ಮುಚ್ಚಿಕೊಂಡು ಕೂರಲು ಸಾಧ್ಯವಾಗಬಹುದೇ..? ನೀವು ಇಂತಹದ್ದೇ ಮಾತುಗಳನ್ನ ಆಡುವವರಾಗಿದ್ದರೆ ನಮ್ಮ ದೇಶ ಮೊದಲಿನಂತೆಯೇ ಸಾಮಾನ್ಯವಾಗಿ ಉಸಿರಾಡುವವರೆಗೆ ನೀವು ಬಾಯಿ ಮುಚ್ಚಿಕೊಂಡಿರಿ. ನಿಮ್ಮ ಮೂರ್ಖತನದಿಂದ ನನ್ನ ಕೆಲಸಗಳಿಗೆ ಅಡ್ಡಿಯಾಗಬಾರದು. ನನಗೆ ನನ್ನ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಬರೆದಿದ್ದಾರೆ. ಆಸ್ಪತ್ರೆಯಲ್ಲೇ ಮದುವೆ ಮಾಡಿಕೊಂಡ ‘ಕೊರೊನಾ’ ಸೋಂಕಿತ….! ತಾಪ್ಸಿಯನ್ನ ಟ್ರೋಲ್ ಮಾಡಲು ಮುಂದಾಗಿದ್ದವರು ಇದೀಗ ಆ ಟ್ವೀಟ್ನ್ನು ಡಿಲೀಟ್ ಮಾಡಿದ್ದಾರೆ. ಕೇವಲ ಟ್ವೀಟ್ ಮಾಡೋದ್ರ ಮೂಲಕ ತಾಪ್ಸಿ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆಯೇ..? ಇತರರ ಸಹಾಯಕ್ಕಾಗಿ ತಮ್ಮ ಐಷಾರಾಮಿ ಕಾರುಗಳನ್ನ ಬಿಟ್ಟುಕೊಡಲು ತಯಾರಿದ್ದಾರೆಯೇ ಎಂದು ಕೇಳಿದ್ದರು. Can you please shut up! Like just STFU ! If this is all u wanna say in these times then hold on until this country gets back to breathing normally and then get back to your shit ways until then DONT CROWD MY TIMELINE WITH YOUR NONSENSE and let me do what I am doing! https://t.co/is6bUOG6mA — taapsee pannu (@taapsee) April 26, 2021