ತಮಿಳು ಚಿತ್ರರಂಗದ ಹಾಸ್ಯ ನಟ ವಿವೇಕ್ ಮೊನ್ನೆಯಷ್ಟೇ ಹೃದಯಾಘಾತದಿಂದ ನಿಧನರಾಗಿದ್ದರು. ಈ ನಟ ದಶಕಗಳಿಂದ ಒಂದು ಹಳೆಯ ಫೋಟೋಗಾಗಿ ಹುಡುಕಾಟ ನಡೆಸುತ್ತಿದ್ದರಂತೆ. ಈ ಫೋಟೋ ಇದೀಗ ಲಭ್ಯವಾಗಿದೆ. ಈ ಫೋಟೋವನ್ನ ಮಧುರೈನ ತಲ್ಲಕುಲಂನಲ್ಲಿ 1983ರಲ್ಲಿ ಟೆಲಿಫೋನ್ ಆಪರೇಟರ್ ತರಬೇತಿ ಮುಗಿಸಿದ ಬಳಿಕ ಕ್ಲಿಕ್ಕಿಸಿದ ಫೋಟೋವಾಗಿತ್ತಂತೆ.
38 ವರ್ಷಗಳ ಹಿಂದಿನ ಈ ಫೋಟೋವನ್ನ ವಿವೇಕ್ರ ಸಹಪಾಠಿಯೊಬ್ಬರು ಬೆಳಕಿಗೆ ತಂದಿದ್ದಾರೆ. ಶನಿವಾರ ವಿವೇಕ್ರ ಸಾವಿನ ವಾರ್ತೆ ವೈರಲ್ ಆಗುತ್ತಿದ್ದಂತೆ ಬಿಎಸ್ಎನ್ಎಲ್ ಇಲಾಖೆ ಸಿಬ್ಬಂದಿ ಈ ಫೋಟೋವನ್ನ ವ್ಯಾಪಕವಾಗಿ ಹಂಚಿಕೊಳ್ತಿದ್ದಾರೆ.
ಚೆನ್ನೈನ ಬಿಎಸ್ಎನ್ಎಲ್ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ಸ್ನೇಹಿತರಿಂದ ಈ ಫೋಟೋಗಳನ್ನ ಪಡೆದ 60 ವರ್ಷದ ಹಿರಿಯ ಪತ್ರಕರ್ತ ಜೇನ್ರಾಮ್ ಈ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಅಂದರೆ ಕಳೆದ 15 ವರ್ಷಗಳಿಂದ ಈ ಫೋಟೋಗಾಗಿ ವಿವೇಕ್ ಹುಡುಕಾಟ ನಡೆಸಿದ್ದರಂತೆ.
ವಿವೇಕನಂದನ್ ಹಾಗೂ ನಾನು ಸೇರಿದಂತೆ ಒಟ್ಟು 29 ಮಂದಿ ಪೋಸ್ಟಲ್ ಹಾಗೂ ಟೆಲಿಕಮ್ಯೂನಿಕೇಷನ್ನಲ್ಲಿ ಟೆಲಿಫೋನ್ ಆಪರೇಟರ್ ಆಗಿ ತರಬೇತಿಗೆ ಸೇರಿದ್ದೇವೆ ಎಂದಿದ್ದಾರೆ ಫೋಟೋ ಕೊಟ್ಟ ವ್ಯಕ್ತಿ. ಮಧುರೈನಲ್ಲಿ 1882 ಡಿಸೆಂಬರ್ 27ರಿಂದ 1983 ಮಾರ್ಚ್ 26ರವರೆಗೆ ಇಲ್ಲಿ ವಿವೇಕ್ ತರಬೇತಿ ಪಡೆದಿದ್ದರಂತೆ.
ಅಮೆರಿಕನ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ್ದ ವಿವೇಕ್ ಕುಟುಂಬಸ್ಥರ ಜೊತೆ ಮಧುರೈನಲ್ಲಿ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಈ ವೇಳೆ ಜೇನ್ರಾಮ್ ಅವರ ನೆರೆಮನೆಯವರಾಗಿದ್ದರು. ಭಾನುವಾರ ವಿವೇಕ್ ನಮ್ಮ ಬಾಡಿಗೆ ಮನೆಗೆ ಭೇಟಿ ನೀಡುತ್ತಿದ್ದರು. ಅಪರೂಪಕ್ಕೆ ಅವರು ಹಾರ್ಮೋನಿಯಂ ಬಾರಿಸುತ್ತಿದ್ದರು ಹಾಗೂ ಅವರು ಶಾಸ್ತ್ರೀಯ ಸಂಗೀತ ಹಾಗೂ ಪಾಪ್ ಸಂಗೀತಗಳನ್ನ ಹಾಡುತ್ತಿದ್ದರು ಎಂದು ಹಳೆಯ ನೆನಪುಗಳನ್ನ ಜೇನ್ರಾಮ್ ಮೆಲುಕು ಹಾಕಿದ್ದಾರೆ.