ಲಾಕ್ಡೌನ್ನಿಂದಾಗಿ ಈಗಾಗಲೇ ಚಿತ್ರೋದ್ಯಮ ಬಂದ್ ಆಗಿದೆ. ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಮನೆಯಲ್ಲಿಯೇ ಉಳಿದಿದ್ದು, ಹೆಚ್ಚಾಗಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ.
ಸದಾ ವಿಡಿಯೋ ಫೋಟೋ ಹಾಕುವ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದಾರೆ. ಅದೇ ರೀತಿ ಬೋಲ್ಡ್ ಫೋಟೋ ಮೂಲಕ ಬಾಲಿವುಡ್ ಬೆಡಗಿ ಅಭಿಮಾನಿಗಳಿಗೆ ಕಾಣಿಸಿದ್ದಾರೆ.
ಹೌದು, ತಮ್ಮ ಫೋಟೋಗಳು, ವಿಡಿಯೋಗಳ ಮೂಲಕ ಭಾರಿ ಸದ್ದು ಮಾಡುವ ಬಾಲಿವುಡ್ ನಟಿ ಊರ್ವಶಿ ರೌತೆಲಾ ಇದೀಗ ಮತ್ತೆ ಬೋಲ್ಡ್ ಫೋಟೋ ಹಾಕುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ತಮ್ಮ ಹಸಿಬಿಸಿ ಫೋಟೋವೊಂದನ್ನು ಹಂಚಿಕೊಂಡಿರುವ ಈ ನಟಿ ಫೋಟೋ ಮೂಲಕ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿದ್ದಾರೆ.
ಈ ನಟಿ ಕೇವಲ ಸಾಮಾಜಿಕ ಜಲಾತಾಣ ಅಥವಾ ಇನ್ನಿತರ ಕೆಲಸಕ್ಕೆ ಸೀಮಿತವಾಗದೆ ಸಾಮಾಜಿಕ ಕಾರ್ಯಕ್ಕೂ ಕೈಜೋಡಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟಕ್ಕೆ 5 ಕೋಟಿ ರೂಪಾಯಿ ಕೊಡುಗೆಯನ್ನು ನೀಡಿದ್ದಾರೆ ಈ ನಟಿ. ಒಟ್ನಲ್ಲಿ ತಮ್ಮ ಬೋಲ್ಡ್ ಫೋಟೋ ಮೂಲಕ ಸಾಕಷ್ಟು ಹುಡುಗರನ್ನು ಹಲ್ ಚಲ್ ಮಾಡಿದ್ದಾಳೆ ಈ ಬೆಡಗಿ.