alex Certify ‘ಡ್ರೀಮ್​ ಗರ್ಲ್’ ಹೇಮಾಮಾಲಿನಿಗೆ ಈಗ 72ರ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಡ್ರೀಮ್​ ಗರ್ಲ್’ ಹೇಮಾಮಾಲಿನಿಗೆ ಈಗ 72ರ ಸಂಭ್ರಮ

ಬಾಲಿವುಡ್​ನ ಡ್ರೀಮ್​ ಗರ್ಲ್​ ಎಂದು ಹೆಸರು ಮಾಡಿದ್ದ ನಟಿ ಹೇಮಾಮಾಲಿನಿ 72ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತನ್ನ ವಿಭಿನ್ನ ಪಾತ್ರಗಳ ಮೂಲಕ ಬೆಳ್ಳಿ ತೆರೆಯಲ್ಲಿ ಕಮಾಲ್​ ಮಾಡಿದ್ದ ಈ ನಟಿ ಅಂದಿನ ಕಾಲದಲ್ಲಿ ಅಭಿಮಾನಿಗಳ ಎದೆಯಲ್ಲಿ ಹಲ್​ಚಲ್​ ಎಬ್ಬಿಸಿದವರು. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಈ ಚೆಲುವೆ ಈಗಲೂ ಕೂಡ ತಮ್ಮ ಸೌಂದರ್ಯವನ್ನ ಹಾಗೆಯೇ ಕಾಪಾಡಿಕೊಂಡು ಬಂದಿದ್ದಾರೆ.

1975ರಲ್ಲಿ ಬಂದ ಶೋಲೆ ಸಿನಿಮಾ ಬಾಲಿವುಡ್​​ನ ಸಿನಿಮಾ ಗತ್ತನ್ನೇ ಬೇರೆ ದಿಕ್ಕಿಗೆ ಕರೆದುಕೊಂಡು ಹೋಯ್ತು. ಅಮಿತಾಭ್​ ಬಚ್ಚನ್​, ಧರ್ಮೇಂದ್ರ, ಸಂಜೀವ್​ ಕುಮಾರ್​, ಜಯಾ ಬಚ್ಚನ್​​ ರಂತಹ ಘಟಾನುಘಟಿ ಕಲಾವಿದರೇ ಇದ್ದ ಈ ಸಿನಿಮಾದಲ್ಲಿ ಬಸಂತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಹೇಮಾಮಾಲಿನಿ ಆಕ್ಟಿಂಗ್​ ಬಗ್ಗೆ ಮಾತಾಡೋ ಹಾಗೇ ಇಲ್ಲ. ಈ ಸಿನಿಮಾ ಬಂದು 45 ವರ್ಷಗಳೇ ಕಳೆದ್ರೂ ಈಗಲೂ ಬಸಂತಿಯ ಫೇಮಸ್​ ಡೈಲಾಗ್ ‘ಯೂ ಕಿ ಯೇ ಕೌನ್​ ಬೋಲಾ’ ಇನ್ನೂ ಚಾಲ್ತಿಯಲ್ಲಿದೆ.

ಸೀತಾ ಔರ್​ ಗೀತಾ ಸಿನಿಮಾದಲ್ಲಿ ಡಬಲ್​ ಆಕ್ಟಿಂಗ್​ನಲ್ಲಿ ಕಾಣಿಸಿಕೊಂಡ ಹೇಮಾ ಮಾಲಿನಿ ಆ ಸಿನಿಮಾದ ಮೂಲಕವೂ ಸಾಕಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ರು. 1977ರಲ್ಲಿ ರಿಲೀಸ್​ ಆದ ಡ್ರೀಮ್​ ಗರ್ಲ್​ ಸಿನಿಮಾದಲ್ಲಿ ಹೇಮಾ ಮಾಲಿನಿ ಒಬ್ಬರೇ 5 ಪಾತ್ರಗಳಿಗೆ ಜೀವ ತುಂಬುವ ಮೂಲಕ ತಾನೊಬ್ಬ ವರ್ಸಟೈಲ್​ ಆಕ್ಟ್ರೆಸ್​ ಅನ್ನೋದನ್ನ ಪ್ರೂವ್​ ಮಾಡಿದ್ರು.

1982ರಲ್ಲಿ ತೆರೆ ಕಂಡ ಸತ್ತೇ ಪೆ ಸತ್ತಾ ಸಿನಿಮಾ ಕೂಡ ಹೇಮಾಮಾಲಿನಿ ಒಬ್ಬ ಅದ್ಭುತ ಕಲಾವಿದೆ ಅನ್ನೋದನ್ನ ಇನ್ನೊಮ್ಮೆ ಪ್ರೂವ್​ ಮಾಡ್ತು. ಅಮಿತಾಬ್​ ಬಚ್ಚನ್​, ಸಚಿನ್​ ಪಿಲ್ಗಾಂವಕರ್​, ಅಮ್ಜಾದ್​ ಖಾನ್​, ಶಕ್ತಿ ಕಪೂರ್​ ಸೇರಿದಂತೆ ಅನೇಕ ಮಹಾನ್​ ನಟರಿದ್ದ ಸಿನಿಮಾದಲ್ಲೂ ನಟಿಸಿದ್ದ ಹೇಮಾ ತನ್ನ ಪಾತ್ರಕ್ಕೆ ಜೀವ ತುಂಬಿದ್ರು.

ಹೇಮಾಮಾಲಿನಿ ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಆಕೆಗೆ ಹೀರೋ ಆಗಿದ್ದು ಅವರ ಪತಿ ಧರ್ಮೇಂದ್ರ. ಆದರೆ ಜನ ಹೇಮಾಮಾಲಿನಿಯನ್ನ ಅಮಿತಾಭ್​ ಜೊತೆ ನೋಡೋಕೆ ಹೆಚ್ಚು ಇಷ್ಟ ಪಡ್ತಿದ್ರು ಅನ್ನೋ ಮಾತು ಕೂಡ ಸುಳ್ಳಲ್ಲ. 2003ರಲ್ಲಿ ತೆರೆ ಕಂಡ ಭಗಭಾನ್​ ಸಿನಿಮಾದಲ್ಲಿ ಹೇಮಾ ಮಾಲಿನಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಹಾಗೂ ಈ ಸಿನಿಮಾ ಮೂಲಕ ತನಗೆ ವಯಸ್ಸಾಗಿದ್ರೂ ಕೂಡ ತನ್ನ ನಟನಾ ಶೈಲಿಗೆ ವಯಸ್ಸಾಗಿಲ್ಲ ಅನ್ನೋದನ್ನ ಸಾಬೀತು ಪಡಿಸಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...