ಡ್ರೀಮ್ ಗರ್ಲ್, ಸ್ಟ್ರೀಟ್ ಡ್ಯಾನ್ಸರ್ ಸೇರಿದಂತೆ ಬಾಲಿವುಡ್ನ ಅನೇಕ ಸಿನಿಮಾಗಳಲ್ಲಿ ನಟಿಸಿರುವ 35 ವರ್ಷದ ನುಶ್ರತ್ ಭರೂಚಾ ತಮ್ಮ ಹೆಸರಿನ ಸ್ಪೆಲ್ಲಿಂಗ್ ಬದಲಾವಣೆ ಮಾಡಿಕೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೇಳೆ ಈ ವಿಚಾರವಾಗಿ ಮಾತನಾಡಿದ ನಟಿ, ಜ್ಯೋತಿಷಿ ಸಲಹೆಯ ಮೇರೆಗೆ ಆಂಗ್ಲ ಭಾಷೆಯಲ್ಲಿ ತಮ್ಮ ಹೆಸರಿನ ಸ್ಪೆಲ್ಲಿಂಗ್ ಬದಲಾವಣೆ ಮಾಡಿಕೊಂಡಿದ್ದೇನೆ ಅಂತಾ ಹೇಳಿದರು. ನನಗೆ ಸಂಖ್ಯಾಶಾಸ್ತ್ರದಲ್ಲಿ ನಂಬಿಕೆ ಇದೆ. ಹೀಗಾಗಿ ನನ್ನ ಹೆಸರಿನ ಸಂಖ್ಯೆಯ ಕಾಗುಣಿತದಿಂದಾಗಿ ನನ್ನ ಜೀವ ಇನ್ನಷ್ಟು ಉತ್ತಮವಾಗಲಿದೆ ಎಂದು ನಂಬಿದ್ದೇನೆ ಅಂತಾ ಹೇಳಿದ್ದಾರೆ .
ಬಾಕ್ಸಾಫೀಸ್ನಲ್ಲಿ 100 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದ ಡ್ರೀಮ್ ಗರ್ಲ್ ಸಿನಿಮಾ ಸದ್ಯ ನುಶ್ರತ್ ನಟನೆಯ ಕೊನೆ ಸಿನಿಮಾವಾಗಿದೆ. ತಮ್ಮ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ನುಶ್ರತ್ ಇನ್ನೂ ಅಧಿಕೃತ ಮಾಹಿತಿ ಹೊರಹಾಕಿಲ್ಲ.