alex Certify ಪಾರ್ಟಿಯ ವೈರಲ್​ ವಿಡಿಯೋದ ಬಗ್ಗೆ ಎನ್​ಸಿಬಿಗೆ ಸ್ಪಷ್ಟನೆ ನೀಡಿದ ಕರಣ್​ ಜೋಹರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಟಿಯ ವೈರಲ್​ ವಿಡಿಯೋದ ಬಗ್ಗೆ ಎನ್​ಸಿಬಿಗೆ ಸ್ಪಷ್ಟನೆ ನೀಡಿದ ಕರಣ್​ ಜೋಹರ್​

ಕಳೆದ ವರ್ಷ ತಮ್ಮ ನಿವಾಸದಲ್ಲಿ ನಡೆಸಲಾದ ಪಾರ್ಟಿಯಲ್ಲಿ ಡ್ರಗ್​ ವ್ಯಸನ ಮಾಡಲಾಗಿದ್ದ ಅಂತಾ ಹೇಳಲಾಗಿದ್ದ ಬಾಲಿವುಡ್​ ನಿರ್ಮಾಪಕ ಕರಣ್​ ಜೋಹರ್​ ಎನ್​ಸಿಬಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವೈರಲ್​ ಆಗಿದ್ದ ಪಾರ್ಟಿಯ ವಿಡಿಯೋವೊಂದರ ಕುರಿತು ಸ್ಪಷ್ಟನೆ ಕೇಳಿ ಡ್ರಗ್ಸ್ ನಿಗ್ರಹ ದಳ ಕರಣ್​ ಜೋಹರ್​ಗೆ ನೋಟಿಸ್​ ನೀಡಿತ್ತು.

ಕರಣ್​ ಜೋಹರ್​ ಎನ್​ಸಿಬಿಯ ನೋಟಿಸ್ ಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದು ಈ ಪತ್ರವನ್ನ ಕರಣ್​ ಜೋಹರ್​ ಪರ ವಕೀಲ ಎನ್​ಸಿಬಿ ಕಚೇರಿಗೆ ರವಾನಿಸಿದ್ದಾರೆ. ಕರಣ್​ ಜೋಹರ್​ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಮುಂದುವರಿಯಲಿದೆ ಅಂತಾ ಎನ್​ಸಿಬಿ ಅಧಿಕಾರಿ ಸಮೀರ್​ ವಾಖೆಂಡ್​ ಹೇಳಿದ್ದಾರೆ.

ಶಿರೋಮಣಿ ಅಕಾಲಿ ದಳದ ಮುಖಂಡ ಮಂಜೀದರ್​ ಸಿಂಗ್​ ಸಿರ್ಸಾ ಈ ವಿಡಿಯೋವನ್ನ ಎನ್​ಸಿಬಿಗೆ ನೀಡಿದ್ದು ಹಾಗೂ ಮುಂಬೈನ ಎನ್​ಸಿಬಿಯಲ್ಲಿ ಈ ವಿಡಿಯೋ ವಿರುದ್ಧ ತನಿಖೆ ನಡೆಸುವಂತೆ ಕೋರಿದ್ದರು.

ಈ ವಿಡಿಯೋ ಬಗ್ಗೆ ನಾನು ಕಳೆದ ವರ್ಷ ಆಗಸ್ಟ್ ತಿಂಗಳಲ್ಲೇ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಆದರೆ ಮುಂಬೈ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಅಂತಾ ಸಿರ್ಸಾ ಆರೋಪಿಸಿದ್ದಾರೆ.

View this post on Instagram

A post shared by Karan Johar (@karanjohar)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...