ಕಳೆದ ವರ್ಷ ತಮ್ಮ ನಿವಾಸದಲ್ಲಿ ನಡೆಸಲಾದ ಪಾರ್ಟಿಯಲ್ಲಿ ಡ್ರಗ್ ವ್ಯಸನ ಮಾಡಲಾಗಿದ್ದ ಅಂತಾ ಹೇಳಲಾಗಿದ್ದ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಎನ್ಸಿಬಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವೈರಲ್ ಆಗಿದ್ದ ಪಾರ್ಟಿಯ ವಿಡಿಯೋವೊಂದರ ಕುರಿತು ಸ್ಪಷ್ಟನೆ ಕೇಳಿ ಡ್ರಗ್ಸ್ ನಿಗ್ರಹ ದಳ ಕರಣ್ ಜೋಹರ್ಗೆ ನೋಟಿಸ್ ನೀಡಿತ್ತು.
ಕರಣ್ ಜೋಹರ್ ಎನ್ಸಿಬಿಯ ನೋಟಿಸ್ ಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದು ಈ ಪತ್ರವನ್ನ ಕರಣ್ ಜೋಹರ್ ಪರ ವಕೀಲ ಎನ್ಸಿಬಿ ಕಚೇರಿಗೆ ರವಾನಿಸಿದ್ದಾರೆ. ಕರಣ್ ಜೋಹರ್ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಮುಂದುವರಿಯಲಿದೆ ಅಂತಾ ಎನ್ಸಿಬಿ ಅಧಿಕಾರಿ ಸಮೀರ್ ವಾಖೆಂಡ್ ಹೇಳಿದ್ದಾರೆ.
ಶಿರೋಮಣಿ ಅಕಾಲಿ ದಳದ ಮುಖಂಡ ಮಂಜೀದರ್ ಸಿಂಗ್ ಸಿರ್ಸಾ ಈ ವಿಡಿಯೋವನ್ನ ಎನ್ಸಿಬಿಗೆ ನೀಡಿದ್ದು ಹಾಗೂ ಮುಂಬೈನ ಎನ್ಸಿಬಿಯಲ್ಲಿ ಈ ವಿಡಿಯೋ ವಿರುದ್ಧ ತನಿಖೆ ನಡೆಸುವಂತೆ ಕೋರಿದ್ದರು.
ಈ ವಿಡಿಯೋ ಬಗ್ಗೆ ನಾನು ಕಳೆದ ವರ್ಷ ಆಗಸ್ಟ್ ತಿಂಗಳಲ್ಲೇ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದೆ. ಆದರೆ ಮುಂಬೈ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಅಂತಾ ಸಿರ್ಸಾ ಆರೋಪಿಸಿದ್ದಾರೆ.
https://www.instagram.com/p/B0bn6fpnRk-/?utm_source=ig_web_copy_link