
ಸದಾ ವಿವಾದದಿಂದಲೇ ಹೆಸರು ಮಾಡಿರುವ ನಟಿ ಪೂನಂ ಪಾಂಡೆ ಮತ್ತೊಂದು ರಗಳೆ ಮಾಡಿಕೊಂಡಿದ್ದಾಳೆ.
ಹಲ್ಲೆ ಮಾಡಿದ ಆರೋಪ ಹೊರಿಸಿ ಆಕೆ ತನ್ನ ಪತಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರೀಗ ಆಕೆಯ ಪತಿಯನ್ನು ಬಂಧಿಸಿದ್ದಾರೆ.
ತನ್ನ ಗೆಳೆಯ ಸ್ಯಾಮ್ ಬಾಂಬೆಯೊಂದಿಗೆ ಇತ್ತೀಚೆಗೆ ಹೊಸ ಜೀವನ ಆರಂಭಿಸಿದ್ದರು. ಇದೀಗ ತನ್ನ ಪತಿ ತನಗೆ ಕಿರುಕುಳ ನೀಡಿದ್ದು, ಹಲ್ಲೆ ಮಾಡಿದ ನಂತರ ಬೆದರಿಕೆ ಹಾಕಿದ್ದಾನೆ ಎಂದು ಪಾಂಡೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
ಕೆಲ ದಿನಗಳ ಹಿಂದೆ ಅವರಿಬ್ಬರೂ ಹನಿಮೂನ್‌ಗೆ ಹೊರಟಿದ್ದರು. ಈ ವಿಷಯವನ್ನು ಪೂನಂ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದೀಗ ಮಧುಚಂದ್ರದ ಸಂಭ್ರಮದಲ್ಲಿದ್ದ ಆಕೆ ಪತಿ ಕಂಬಿ ಎಣಿಸುವಂತಾಗಿದೆ.