alex Certify ಶಂಕರ್​ ನಾಗ್​ ಜೊತೆಗಿರುವ ಫೋಟೊ ಶೇರ್​ ಮಾಡಿದ ಬಾಲಿವುಡ್​ ಹಿರಿಯ ನಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಂಕರ್​ ನಾಗ್​ ಜೊತೆಗಿರುವ ಫೋಟೊ ಶೇರ್​ ಮಾಡಿದ ಬಾಲಿವುಡ್​ ಹಿರಿಯ ನಟಿ..!

ಬಾಲಿವುಡ್​ ಹಿರಿಯ ನಟಿ ನೀನಾ ಗುಪ್ತಾ ‘ಉತ್ಸವ್’​ ಸಿನಿಮಾ ಸೆಟ್​​ನಲ್ಲಿ ತೆಗೆಯಲಾದ ಫೋಟೋವೊಂದನ್ನ ಶೇರ್​ ಮಾಡಿದ್ದು, ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ವಿಶೇಷ ಅಂದ್ರೆ ನೀನಾ ಗುಪ್ತಾ ಶೇರ್ ಮಾಡಿರುವ ಈ ಫೋಟೋದಲ್ಲಿ ಅವರು ಚಂದನವನದ ದಂತಕತೆ ಶಂಕರ್​ನಾಗ್​ ಅವರ ಜೊತೆಯಲ್ಲಿದ್ದಾರೆ.

ಈ ಫೋಟೋವನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ನಟಿ ನೀನಾ ಗುಪ್ತಾ : ಉತ್ಸವ್​ ಸಿನಿಮಾ ಶೂಟಿಂಗ್​ ವೇಳೆ ತೆಗೆಯಲಾದ ಸುಂದರವಾದ ಫೋಟೋ ಇದಾಗಿದೆ. ನಾನು ಶಂಕರ್​ನಾಗ್​ ಅವರನ್ನ ಮಿಸ್​ ಮಾಡಿಕೊಳ್ತಿದ್ದೇನೆ. ಶಂಕರ್​ ನೀವು ನಮ್ಮನ್ನೆಲ್ಲ ಬಹಳ ಬೇಗನೇ ಬಿಟ್ಟು ಹೋಗಿದ್ದೀರಾ ಎಂದು ಶೀರ್ಷಿಕೆ ನೀಡಿದ್ದಾರೆ.

ಗಿರೀಶ್​ ಕಾರ್ನಾಡ್​ ನಿರ್ದೇಶನದ ಈ ಸಿನಿಮಾದಲ್ಲಿ ತಮ್ಮ ಹಾಗೂ ಶಂಕರ್​ ನಾಗ್​ ನಡುವೆ ಕೆಲ ಆತ್ಮೀಯ ಕ್ಷಣಗಳನ್ನ ದೃಶ್ಯಗಳೂ ಇದ್ದವು ಎಂದು ನೀನಾ ಹೇಳಿದ್ದಾರೆ. ಶೂಟಿಂಗ್​ಗೂ ಮುನ್ನ ನಾವು ಉತ್ತಮವಾಗಿ ಸಂವಹನ ಮಾಡುತ್ತಿದ್ದೆವು. ಆದರೆ ನಾವು ಅಷ್ಟೇನು ಆತ್ಮೀಯ ಸ್ನೇಹಿತರಾಗಿರಲಿಲ್ಲ. ಆದರೆ ಶೂಟಿಂಗ್ ಬಳಿಕ ನಮ್ಮ ನಡುವೆ ಉತ್ತಮ ಬಾಂಧವ್ಯ ಬೆಳೆಯಿತು. ಕೆಲವೊಂದು ಭೇಟಿಗಳು ಒಂದು ಸುಂದರವಾದ ಸ್ನೇಹವನ್ನ ಹುಟ್ಟುಹಾಕುತ್ತದೆ ಎಂದು ಬರೆದಿದ್ದಾರೆ.

View this post on Instagram

A post shared by Neena Gupta (@neena_gupta)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...